ADVERTISEMENT

ಮಂಗಳೂರು ವಿವಿಯಲ್ಲಿ 'ಕನಕ ಸಾಹಿತ್ಯ ಸಮ್ಮೇಳನ' 22ರಿಂದ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 14:17 IST
Last Updated 17 ಜುಲೈ 2022, 14:17 IST
ಕನಕದಾಸ
ಕನಕದಾಸ   

ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ, ಬೆಂಗಳೂರಿನರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಕನಕ ಸಾಹಿತ್ಯ ಸಮ್ಮೇಳನ' ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಇದೇ 22 ಹಾಗೂ 23ರಂದು ನಡೆಯಲಿದೆ.

22ರಂದು ಬೆಳಿಗ್ಗೆ 10 ಗಂಟೆಗೆ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿರುವರು. ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ, ಬೆಂಗಳೂರಿನ ಕನಕದಾಸ ಸಂಶೋಧನ ಕೇಂದ್ರದ ಸಮನ್ವಯಾಧಿಕಾರಿ ಎಂ.ಆರ್.ಸತ್ಯನಾರಾಯಣ, ಮಂಗಳೂರಿನ ಕನಕ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು.

ಪರಂಪರೆಯ ಬೆಳಕಲ್ಲಿ ಕನಕ, ವರ್ತಮಾನದ ಕನ್ನಡಿಯಲ್ಲಿ ಕನಕ, ಡಾ.ವಸಂತ ಭಾರದ್ವಾಜರ ಕನಕ ತರಂಗಿಣಿ ಮಹಾಕಾವ್ಯ ಚಿಂತನ ಗೋಷ್ಠಿಗಳು ನಡೆಯಲಿದ್ದು ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ಲಕ್ಷ್ಮೀಶ ತೋಳ್ಪಾಡಿ, ಎಂ.ಆರ್ ಸತ್ಯನಾರಾಯಣ, ಡಾ.ಪಾದೇಕಲ್ಲು ವಿಷ್ಣು ಭಟ್ಟ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರೊ.ಶಿವರಾಮ ಶೆಟ್ಟಿ, ಪ್ರೊ.ನಿತ್ಯಾನಂದ ಬಿ ಶೆಟ್ಟಿ, ಡಾ. ಜ್ಯೋತಿ ಶಂಕರ್, ಡಾ.ಶುಭಾ ಮರವಂತೆ, ಅಳಗೋಡು ಶಿವಕುಮಾರ್, ಡಾ.ಮಂಜುನಾಥ ಬೆಳವಾಡಿ ಭಾಗವಹಿಸಲಿದ್ದಾರೆ.

ADVERTISEMENT

23ರಂದು ನಡೆಯುವ ಕನಕ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ವಹಿಸಲಿದ್ದು ಡಾ.ವಸಂತಕುಮಾರ್ ಪೆರ್ಲ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಾಧಾಕೃಷ್ಣ ಉಳಿಯತ್ತಡ್ಕ, ಟಿ.ಎ.ಎನ್. ಖಂಡಿಗೆ, ಡಾ. ಸತ್ಯಮಂಗಲ ಮಹಾದೇವ ಭಾಗವಹಿಸಲಿದ್ದಾರೆ.`ಕನಕ ಕಾವ್ಯ –ಗೀತ-ನೃತ್ಯ ಸಾಧ್ಯತೆಗಳು’ ಕುರಿತು ಶಿವಮೊಗ್ಗದ ಡಾ. ಕೆ.ಎಸ್. ಪವಿತ್ರ ಉಪನ್ಯಾಸ ನೀಡುವರು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಕಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಸಮಾರೋಪ ಭಾಷಣ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಧ್ಮುಖ್ಯ ಅತಿಥಿಗಳಾಗಿರುವರು.

ಕನಕ ಸಾಂಸ್ಕೃತಿಕ ಸಂಭ್ರಮ:ಸಮ್ಮೇಳನದಲ್ಲಿ ವಿವಿಧ ಗಾಯಕರಿಂದ ಕನಕ ಗಾಯನ, ವ್ಯಾಖ್ಯಾನ, ಅರ್ಥಾನುಸಂಧಾನ, ಗೊಂಬೆಯಾಟ, ಯಕ್ಷಗಾನ ಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.