ADVERTISEMENT

ಮಂಗಳೂರು ವಿಮಾನ ನಿಲ್ದಾಣಕ್ಕೆ ಹಸಿರು ತೋರಣ

1.38 ಹೆಕ್ಟೇರ್‌ ಪ್ರದೇಶದಲ್ಲಿ 85 ತಳಿಯ ಸಸ್ಯಗಳು

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:50 IST
Last Updated 26 ಜುಲೈ 2022, 5:50 IST
ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಬೆಳೆಸಿರುವ ಸಸ್ಯ ವೈವಿಧ್ಯ
ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಬೆಳೆಸಿರುವ ಸಸ್ಯ ವೈವಿಧ್ಯ   

ಬಜಪೆ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲು ಸಿದ್ಧತೆ ನಡೆಸಿದೆ. ವಿಮಾನ ನಿಲ್ದಾಣದ ಒಳ ಹಾಗೂ ಹೊರ ಆವರಣವು ಹಸಿರಿನಿಂದ ಕಂಗೊಳಿಸುತ್ತಿದೆ.

ವಿಮಾನ ನಿಲ್ದಾಣದ ಒಳ ಆವರಣದಲ್ಲಿ ಸುಮಾರು 1,215 ಚದರ ಮೀಟರ್‌ನಲ್ಲಿ 111 ತಾಳೆ ಗಿಡಗಳು, 464 ಮರಗಳು ಸೇರಿದಂತೆ 515 ಒಳಾಂಗಣ ಸಸ್ಯಗಳು ಇವೆ. ನಿಲ್ದಾಣದ ವ್ಯಾಪ್ತಿಯ 1.38 ಹೆಕ್ಟೇರ್‌ ಪ್ರದೇಶದಲ್ಲಿ 85 ತಳಿಯ ಸಸ್ಯಗಳು ಬೆಳೆಯುತ್ತಿವೆ.

ಹೂವಿನ ಗಿಡಗಳು, ಹಣ್ಣಿನ ಗಿಡಗಳು ಹಸಿರು ಸೌಂದರ್ಯವನ್ನು ಹೆಚ್ಚಿಸಿವೆ. ಹಣ್ಣಿನ ಗಿಡಗಳು ಹಕ್ಕಿಗಳನ್ನು ಸೆಳೆಯುತ್ತವೆ. ‘ರಾಡಾರ್‌ಮರ್ಚೆರಾ’ ಚೀನಾದ ಡಾಲ್ ಎಂದು ಕರೆಯುವ ಸಸ್ಯವು ತನ್ನ ಎಲೆಗಳ ಮೂಲಕ ನೋಡುಗರನ್ನು ಆಕರ್ಷಿಸುತ್ತದೆ. ಇದು ನಿತ್ಯಹರಿದ್ವರ್ಣವಾಗಿರುವ ಪೊದೆಯಂತಹ ಸಸ್ಯವಾಗಿದೆ. ಬೆಳೆಸಿರುವ ಸಸ್ಯಗಳಲ್ಲಿ ಶೇ 80 ರಷ್ಟಯ ಸ್ಥಳೀಯ ಜಾತಿಯ ಸಸ್ಯಗಳಾಗಿವೆ.

ADVERTISEMENT

ವಿಮಾನ ನಿಲ್ದಾಣದಲ್ಲಿ ಉತ್ಪತ್ತಿಯಾಗುವ ನೀರನ್ನು ಸಂಸ್ಕರಿಸಿ, ಇಲ್ಲಿನ ಸಸ್ಯಗಳಿಗೆ ಒದಗಿಸಲಾಗುತ್ತದೆ. ಸಾವಯವ ಗೊಬ್ಬರವನ್ನೇ ಬಳಕೆ ಮಾಡಲಾಗುತ್ತದೆ. ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ಬಳಕೆ ಮಾಡುವುದರಿಂದ ನೀರಿನ ಮಿತ ಬಳಕೆ ಸಾಧ್ಯವಾಗಿದೆ. ಟರ್ಮಿನಲ್‌ ಆವರಣದಲ್ಲಿ ಸ್ಥಳೀಯ ಜಾತಿಯ ಸಸ್ಯಗಳನ್ನು ಬಳಸಿ, ಉಷ್ಣವಲಯದ ಅರಣ್ಯ ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.