ADVERTISEMENT

ಮಂಗಳೂರು ಸ್ಫೋಟ: ರಿಕ್ಷಾದಲ್ಲಿತ್ತು ಕುಕ್ಕರ್, ವೈರ್, ನಟ್‌ ಬೋಲ್ಟ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 18:34 IST
Last Updated 20 ನವೆಂಬರ್ 2022, 18:34 IST
ಸ್ಪೋಟಗೊಂಡ ಆಟೋದಲ್ಲಿ ಇದ್ದ ಕುಕ್ಕರ್
ಸ್ಪೋಟಗೊಂಡ ಆಟೋದಲ್ಲಿ ಇದ್ದ ಕುಕ್ಕರ್   

ಮಂಗಳೂರು: ‘ನಗರದ ಗರೋಡಿಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಆಟೊರಿಕ್ಷಾದಲ್ಲಿ ಕುಕ್ಕರ್, ನಟ್‌, ಬೋಲ್ಟ್ ಹಾಗೂ ವೈರ್‌ಗಳಿದ್ದವು’ ಎಂದು ಪ್ರತ್ಯಕ್ಷದರ್ಶಿ ಸುಭಾಷ್ ಶೆಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶನಿವಾರ 5 ಗಂಟೆ ಸುಮಾರಿಗೆ ಕೃತ್ಯ ಸಂಭವಿಸಿದೆ. ಆಗ ನಾನು ಸಮೀಪದಲ್ಲಿರುವ ನಮ್ಮ ತರಕಾರಿ ಅಂಗಡಿಯಲ್ಲಿದ್ದೆ. ದೊಡ್ಡ ಪಟಾಕಿ ಸ್ಫೋಟಿಸಿದ ಸದ್ದು ಕೇಳಿಸಿತು. ರಿಕ್ಷಾದಲ್ಲಿ ದಟ್ಟ ಹೊಗೆ ಕಾಣಿಸಿತ್ತು‌. ಸ್ಥಳಕ್ಕೆ ಧಾವಿಸಿ ನೋಡಿದಾಗ ರಿಕ್ಷಾ ಚಾಲಕನ ತಲೆಗೆ ಸುಟ್ಟ ಗಾಯಗಳಾಗಿದ್ದವು’ ಎಂದರು.

‘ರಿಕ್ಷಾದಲ್ಲಿದ್ದ ಪ್ರಯಾಣಿಕ ಎರಡೆರಡು ಬಟ್ಟೆ ಹಾಕಿದ್ದ. ಆತನ ಕೈ ಕೂಡ ಸುಟ್ಟು ಹೋಗಿತ್ತು. ನೀರು ಹಾಕಿ ಬೆಂಕಿ ನಂದಿಸಿದೆವು. ಬೇರೆ ಆಟೊರಿಕ್ಷಾದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಿದೆವು. ಸ್ಫೋಟ ಸಂಭವಿಸಿದಾಗ ಇಲ್ಲಿ ಹೆಚ್ಚು ಜನ ಇರಲಿಲ್ಲ. ಟ್ರಾಫಿಕ್ ಜಾಮ್ ಆಗಬಾರದು ಎಂಬ ಕಾರಣಕ್ಕೆ ಸ್ಥಳದಲ್ಲಿದ್ದ ಆಟೊರಿಕ್ಷಾವನ್ನು ಪಕ್ಕಕ್ಕೆ ಸರಿಸಿದೆವು’ ಎಂದು ಅವರು ವಿವರಿಸಿದರು.

ADVERTISEMENT

‘ರಿಕ್ಷಾ ಚಾಲಕ ಉಜ್ಜೋಡಿಯವರು. ಅವರು ನಮ್ಮ ಪರಿಚಯದವರೇ. ಅವರು ತಲೆ ಕೂದಲು ಸುಟ್ಟು ಹೋಗಿತ್ತು. ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿದ್ದು ನಾನೇ. ರಿಕ್ಷಾದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿರಬಹುದು ಎಂದು ಮೊದಲು ಭಾವಿಸಿದ್ದೆವು. ಆದರೆ, ನಂತರ ನೋಡುವಾಗ ಕುಕ್ಕರ್, ಬೋಲ್ಟ್, ನಟ್‌, ಬ್ಯಾಟರಿ ಹಾಗೂ ವೈರ್‌ಗಳು ರಿಕ್ಷಾದಲ್ಲಿದ್ದವು. ಸಂಶಯ ಬಂದು ಕಂಕನಾಡಿ ಪೊಲೀಸ್
ಠಾಣೆಗೆ ಮಾಹಿತಿ ನೀಡಿದೆ’ ಎಂದು ತಿಳಿಸಿದರು.

ತಮಿಳುನಾಡು ವ್ಯಕ್ತಿಯ ವಿಚಾರಣೆ (ಚೆನ್ನೈ ವರದಿ): ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಬಳಸಿದ ಮೊಬೈಲ್‌ ನಂಬರ್‌ ಅನ್ನು ತಮಿಳುನಾಡಿನ ವ್ಯಕ್ತಿಯೊಬ್ಬರ ಆಧಾರ್‌ ಕಾರ್ಡ್‌ ಬಳಸಿ ಪಡೆದುಕೊಳ್ಳಲಾಗಿತ್ತು ಎಂಬ ಶಂಕೆಯ ಮೇರೆಗೆ ನೀಲಗಿರಿ ಜಿಲ್ಲೆಯ ಸುರೇಂದ್ರನ್‌ ಅವರನ್ನು ತಮಿಳುನಾಡು ಪೊಲೀಸರು ಭಾನುವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಎನ್‌ಐಎಯಿಂದ ತನಿಖೆ: ನಳಿನ್‌ ಕುಮಾರ್‌ ಕಟೀಲ್‌

ಸ್ಫೋಟದ ತನಿಖೆಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಟ್ವೀಟ್‌ ಮಾಡಿದ್ದಾರೆ.

‘ಈ ಕೃತ್ಯದ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆ ಹಚ್ಚಲುಎನ್‌ಐಎ ತನಿಖೆಯಿಂದ ನೆರವಾಗಲಿದೆ. ಬಾಂಬ್ ಸ್ಫೋಟದ ಹಿಂದೆ ಅಂತರರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು ಎನ್‌ಐಎ ಕಾರ್ಯತತ್ಪರವಾಗಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು’

‘ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ. ದೇಶದ್ರೋಹಿ ಸಂಘಟನೆಗಳನ್ನು ನಿಷೇಧ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌, ‘ಈ ಕೃತ್ಯದ ಬಗ್ಗೆ ಸಮಗ್ರ ತನಿಖೆ ಆಗಬೇಕು. ರಿಕ್ಷಾದಲ್ಲಿ ಪ್ರಯಾಣಿಸಿದ ವ್ಯಕ್ತಿ ಏಕೆ ಕುಕ್ಕರ್‌ ತಂದಿದ್ದ. ಎಲ್ಲಿ ಏನು ಮಾಡಬೇಕೆಂಬ ಉದ್ದೇಶ ಇತ್ತು ಎಂಬ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಬೇಕು. ನಗರದಲ್ಲಿ ಯಾವತ್ತೂ ಬಾಂಬ್‌ ಸ್ಫೋಟ ನಡೆದಿರಲಿಲ್ಲ. ಕರ್ನಾಟಕ ಕೇರಳದ ಗಡಿ ಪ್ರದೇಶವಿದು. ಇಲ್ಲಿ ಘಟನೆ ಆದಾಗ ಕೇರಳಕ್ಕೆ ಪರಾರಿಯಾಗುತ್ತಾರೆ. ಇದನ್ನು ತಪ್ಪಿಸಲು ಎನ್‌ಐಎ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಎನ್‌ಐಎಯಿಂದತನಿಖೆ: ನಳಿನ್‌

‘ಕೃತ್ಯಕ್ಕೂ ಪ್ರೇಮರಾಜನಿಗೂ ನಂಟಿಲ್ಲ’

ಮಂಗಳೂರು: ಆಟೊರಿಕ್ಷಾ ಸ್ಫೋಟ ಪ್ರಕರಣಕ್ಕೂ ಹುಬ್ಬಳ್ಳಿಯ ಪ್ರೇಮರಾಜನಿಗೂ ಸಂಬಂಧವಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಭಾನುವಾರ ಟ್ವೀಟ್‌ ಮಾಡಿರುವ ಅವರು, ‘ಪ್ರೇಮರಾಜ ದಾಖಲೆಗಳು ಕಳವಾಗಿದ್ದವು. ಅವರಿಗೂ ಈ ಸ್ಫೋಟಕ್ಕೂ ಸಂಬಂಧ ಇಲ್ಲ’ ಎಂದು ತಿಳಿಸಿದ್ದಾರೆ.

‘ರಿಕ್ಷಾದಲ್ಲಿ ಸಂಭವಿಸಿದ ಲಘು ಸ್ಫೋಟವು ಭಯೋತ್ಪಾದನೆ ಕೃತ್ಯ. ಗಂಭೀರ ಹಾನಿ ಉಂಟು ಮಾಡಲೆಂದೇ ಕೃತ್ಯ ನಡೆಸಲಾಗಿದೆ. ರಾಜ್ಯದ ಪೊಲೀಸರು ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ಸೇರಿ ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಸುಧಾರಿತ ಸ್ಫೋಟ ಸಾಧನ?

‘ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟ ಸಾಧನವನ್ನು (ಐಇಡಿ) ಕುಕ್ಕರ್‌ನಲ್ಲಿ ಅಳವಡಿಸಿರುವ ಸಾಧ್ಯತೆ ಇದೆ. ಕೃತ್ಯ ನಡೆದ ಸ್ಥಳದಲ್ಲಿ ಕುಕ್ಕರ್ ಬಾಂಬ್‌ ಸ್ಫೋಟಿಸುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಬೇರೆಲ್ಲೋ ಸ್ಫೋಟಿಸಬೇಕಾದ ಬಾಂಬ್‌ ಗರೋಡಿಯಲ್ಲಿ ಸ್ಫೋಟಿಸಿದೆ’ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

‘ಮಂಗಳೂರು ಸೂಕ್ಷ್ಮ ಪ್ರದೇಶ. ಇಲ್ಲಿ ಸಾಮರಸ್ಯ ಕೆ ಡಿಸುವ ಉದ್ದೇಶವೂ ಈ ಕೃತ್ಯದ ಹಿಂದೆ ಇದ್ದಂತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.