ADVERTISEMENT

ಮಂಗಳೂರು | ಬಾಂಗ್ಲಾದೇಶಿ ಎಂದು ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 17:06 IST
Last Updated 13 ಜನವರಿ 2026, 17:06 IST
<div class="paragraphs"><p>ರತೀಶ್‌ ದಾಸ್‌, ಧನುಷ್‌,&nbsp;ಸಾಗರ್‌</p></div>

ರತೀಶ್‌ ದಾಸ್‌, ಧನುಷ್‌, ಸಾಗರ್‌

   

ಮಂಗಳೂರು: ಕೂಲಿ ಕೆಲಸಕ್ಕಾಗಿ ಜಾರ್ಖಂಡ್‌ದಿಂದ ಮಂಗಳೂರಿಗೆ ಬಂದಿದ್ದ ಕಾರ್ಮಿಕ ದಿಲ್‌ಜಾನ್ ಅನ್ಸಾರಿ ಎಂಬುವವರ ಮೇಲೆ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ಕೂಳೂರು ನಾರಾಯಣ ಗುರು ಭಜನಾ ಮಂದಿರ ಸಮೀಪದ ನಿವಾಸಿಗಳಾದ ರತೀಶ್ ದಾಸ್‌ ಅಲಿಯಾಸ್ ಲಾಲು (32), ಧನುಷ್ (24) ಹಾಗೂ ಕೂಳೂರು ರಾಯಕಟ್ಟೆಯ ಸಾಗರ್‌ (24) ಬಂಧಿತರು. ಮೋಹನ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. 

ADVERTISEMENT

‘ಕಾರ್ಮಿಕ ದಿಲ್‌ಜಾನ್ ಅವರನ್ನು ಕೂಳೂರಿನಲ್ಲಿ ಭಾನುವಾರ ಸಂಜೆ ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದ ಆರೋಪಿಗಳು, ‘ನೀನು ಬಾಂಗ್ಲಾದೇಶದವ. ಹಿಂದೂನಾ, ಮುಸ್ಲಿಮಾ? ನಿನ್ನಲ್ಲಿರುವ ದಾಖಲೆ ತೋರಿಸು’ ಎಂದು ಪ್ರಶ್ನಿಸಿ, ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.