ADVERTISEMENT

ಮಂಗಳೂರು: ಆನ್‌ಲೈನ್‌ನಲ್ಲಿ ₹ 27 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 7:04 IST
Last Updated 25 ಜೂನ್ 2025, 7:04 IST
<div class="paragraphs"><p>ವಂಚನೆ</p></div>

ವಂಚನೆ

   

ಮಂಗಳೂರು: ಮನೆಯಿಂದಲೇ ಉದ್ಯೊಗ ಮಾಡಿ ಹಣ ಗಳಿಸಬಹುದು ಎಂಬ ಆಮಿಷ ಒಡ್ಡಿ, ವಿವಿಧ ಟಾಸ್ಕ್‌ ನೀಡಿ ₹ 27 ಲಕ್ಷ ಹಣ ಪಡೆದು ವಂಚನೆ ಮಾಡಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ದೂರು ನೀಡಿದ್ದು, ನಗರದ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನಗೆ ಜೂನ್ 11ರಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ನೋಡುವಾಗ ಮನೆಯಿಂದಲೇ  ಉದ್ಯೋಗ ಮಾಡಿ ಹಣ ಗಳಿಸಬಹುದು ಎಂದು ಜಾಹೀರಾತು ಕಾಣಿಸಿಕೊಂಡಿತ್ತು. ಅದರ ಕೊಂಡಿಯನ್ನು ಕ್ಲಿಕ್ಕಿಸಿದಾಗ ಗ್ಲೋಬಲ್ ಪಾರ್ಟ್ ಟೈಮ್ ಜಾಬ್ ಎಂಬ ಸಂದೇಶ ಬಂತು. ಶೇರ್ ಚಾಟ್ಸ್‌ನಲ್ಲಿ ಲೈಕ್ ಮಾಡಿದರೆ ಒಂದು ಟಾಸ್ಕ್‌ಗೆ ₹ 120ರಂತೆ ಹಣ ನೀಡುತ್ತೇವೆ. ದಿನದಲ್ಲಿ 20 ಟಾಸ್ಕ್‌ ಪೂರ್ಣಗೊಳಿಸಿದರೆ ₹ 5 ಸಾವಿರ ನೀಡುತ್ತೇವೆ ಎಂದು ತಿಳಿಸಿದ್ದರು. ಮೊದಲ ದಿನ 20 ಟಾಸ್ಕ್ ಪೂರ್ಣಗೊಳಿಸಿದ್ದಕ್ಕೆ ₹ 320 ನೀಡಿದ್ದರು. ಟಾಸ್ಕ್ ಪ್ರಕಾರ ಅವರು ಸೂಚಿಸಿದ ಬೇರೆ ಬೇರೆ ಖಾತೆಗಳಿಗೆ ಜೂನ್ 13ರಿಂದ 20ರವರೆಗೆ ಹಂತ ಹಂತವಾಗಿ ₹ 27 ಲಕ್ಷ  ಪಾವತಿಸಿದ್ದೆ. ಅದನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆಗ ವಂಚನೆಗೆ ಒಳಗಾಗಿದ್ದು ಗೊತ್ತಾಯಿತು ಎಂಬುದಾಗಿ ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.