ADVERTISEMENT

ಬಂಟ್ವಾಳ | ಮನೆ ಮೇಲೆ ಗುಡ್ಡ ಕುಸಿತ: ಮಹಿಳೆ ಸಾವು, ಯುವತಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 4:22 IST
Last Updated 7 ಜುಲೈ 2023, 4:22 IST
ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದಲ್ಲಿ ಕುಸಿದ ಮನೆಯಲ್ಲಿ ರಕ್ಷಣಾ ಕಾರ್ಯಾಚರಣೆ
ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದಲ್ಲಿ ಕುಸಿದ ಮನೆಯಲ್ಲಿ ರಕ್ಷಣಾ ಕಾರ್ಯಾಚರಣೆ   

ಬಂಟ್ವಾಳ (ದಕ್ಷಿಣ ಕನ್ನಡ): ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯ ಕಾರಣ ಮನೆಯ ಮೇಲೆ ಸಮೀಪದ ಗುಡ್ಡ ಜರಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮನೆಯೊಳಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ.

ಬಂಟ್ವಾಳ ತಾಲ್ಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರದಲ್ಲಿ ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದೆ.

ADVERTISEMENT

ಗ್ರಾಮದ ಗುಂಪು ಮನೆಗಳ ಪೈಕಿ ಮಹಮ್ಮದ್ ಎಂಬುವರ ಮನೆ ಮೇಲೆ ಗುಡ್ಡ ಜರಿದು ಬಿದ್ದಿದೆ. ಮನೆಯ ಒಳಗಿದ್ದ ಮಹಮ್ಮದ್ ಅವರ ಪತ್ನಿ ಝರಿನಾ (49) ಮತ್ತು ಪುತ್ರಿ ಶಫಾ (20) ಸಿಕ್ಕಿಕೊಂಡಿದ್ದರು. ಝರೀನಾ ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಾಗ ದಾರಿ‌ ಮಧ್ಯೆ ಸಾವಿಗೀಡಾಗಿದ್ದಾರೆ.

ಶಫಾ ಅವರನ್ನು ಕೂಡಲೇ ಊರ ಜನರು ಹೊರಗೆ ತೆಗೆದಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಲಿಲ್ಲ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ನಗರ ಠಾಣೆ ಪೊಲೀಸ್ ಸಿಬ್ಬಂದಿ‌ ಮತ್ತು ತಹಶೀಲ್ದಾರ್ ಎನ್.ಎಸ್ ಕೂಡಲಗಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.