ADVERTISEMENT

ನಂಬರ್ ಪ್ಲೇಟ್‌ ಮರೆಮಾಚಿ ಸ್ಕೂಟರ್ ಚಾಲನೆ: ₹ 5,500 ದಂಡ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:32 IST
Last Updated 6 ಏಪ್ರಿಲ್ 2025, 7:32 IST
ಸ್ಕೂಟರ್‌ನ ನಂಬರ್ ಪ್ಲೇಟ್ ಮರೆಮಾಚಿರುವುದು
ಸ್ಕೂಟರ್‌ನ ನಂಬರ್ ಪ್ಲೇಟ್ ಮರೆಮಾಚಿರುವುದು   

ಮಂಗಳೂರು: ದ್ವಿಚಕ್ರ ವಾಹನದ ನಂಬರ್ ಪ್ಲೇಟ್‌ ಅನ್ನು ಪ್ಲಾಸ್ಟಿಕ್‌ ಕವರ್‌ನಿಂದ ಮರೆಮಾಚಿ, ಅದನ್ನು ಚಲಾಯಿಸಿದ್ದ ಸವಾರನಿಗೆ ನಗರದ ಸಂಚಾರ ಪೊಲೀಸರು ₹ 5,500 ದಂಡ ವಿಧಿಸಿದ್ದಾರೆ.

‘ಸ್ಕೂಟರ್‌ ಸವಾರನೊಬ್ಬ ವಾಹನದ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್ ನಿಂದ ಮರೆ ಮಾಚಿ, ಹೆಲ್ಮೆಟ್ ಧರಿಸದೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್  ಮಾರ್ಗವಾಗಿ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು ಹೋದ ವಿಡಿಯೊವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೆವು. ನಿಯಮ ಉಲ್ಲಂಘನೆ ಮಾಡಿದ ಸ್ಕೂಟರ್‌ ಯಾರದ್ದು ಎಂಬುದನ್ನು ಸಂಚಾರ ವಿಭಾಗದ ಪೊಲೀಸರು ಪತ್ತೆ ಮಾಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. 

‘ಸ್ಕೂಟರ್‌ನ ದಾಖಲಾತಿಗಳನ್ನು ಪರಿಶೀಲನೆ ನಡೆಸಿರುವ ಸಂಚಾರ ಪೊಲೀಸರು, ಸವಾರನ ವಿರುದ್ದ ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಂಡಿದ್ದಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ, ನಂಬರ್‌ ಪ್ಲೇಟ್ ಮರೆ ಮಾಚಿದ್ದಕ್ಕೆ, ದೋಷಪೂರಿತ ನಂಬರ್‌ ಪ್ಲೇಟ್ ಬಳಸಿದ್ದಕ್ಕೆ, ನಿರ್ಲಕ್ಷ್ಯದ ಚಾಲನೆಗೆ, ವಾಹನ ಚಲಾವಣೆ ಪರವಾನಗಿ ಇಲ್ಲದೆಯೇ ಸ್ಕೂಟರ್ ಚಲಾಯಿಸಿದ್ದಕ್ಕೆ ಹಾಗೂ ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಿದ್ದಕ್ಕೆ ಸೇರಿ ಒಟ್ಟು ₹ 5,500 ದಂಡ ವಿಧಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.