ಮಂಗಳೂರು: ಇಸ್ರೊದ ಗಗನಯಾನ ಮಾದರಿ, ಪ್ಲಾಸ್ಟಿಕ್ ಸೇರಿದಂತೆ ಹೆಚ್ಚುತ್ತಿರುವ ಕಸ ಸಮಸ್ಯೆಗೆ ಪರಿಹಾರ, ಪರಿಸರಕ್ಕೆ ಹಾನಿಯಾಗದಂತೆ ಅವುಗಳ ಮರುಬಳಕೆ, ಗೃಹ ಬಳಕೆ ಸಾಧನಗಳು, ವಿಪತ್ತು ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸಾಧನಗಳು, ಜನರಿಗೆ ನೆರವಾಗಬಲ್ಲ ಉಪಕರಣಗಳು... ಹೀಗೆ ವಿವಿಧ ಬಗೆಯ, ವಿದ್ಯಾರ್ಥಿ ವಿಜ್ಞಾನಿಗಳೇ ತಯಾರಿಸಿದ ಮಾದರಿಗಳು ಅಲ್ಲಿದ್ದವು. ಅವುಗಳ ಬಗ್ಗೆ ವಿವರಿಸುತ್ತಿದ್ದ ಎಳೆಯ ವಿಜ್ಞಾನಿಗಳು ಭಾರತದ ಭವಿಷ್ಯದ ಬಗ್ಗೆ ಭರವಸೆಯನ್ನೂ ಮೂಡಿಸುತ್ತಿದ್ದರು.
ಈ ಚಿತ್ರಣ ಕಂಡುಬಂದಿದ್ದು ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ಮೇಳ ‘ಎಕ್ಸ್‌ಲರೇಟ್’ನ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ‘ಎಕ್ಸ್-ಝಿಬಿಟ್’ನಲ್ಲಿ.
ಮಂಗಳೂರಿನ ಕೆನರಾ ಸ್ಕೂಲ್‌ನ ನಿಹಾಲ್ ಮತ್ತು ಚಿನ್ಮಯ್ ರೈ ‘ಸ್ಮಾರ್ಟ್ ಶೆಡ್’, ನಮನ್ ಮತ್ತು ಅಭಿನವ್ ‘ಪಾಲಿ ಫ್ಯುಯೆಲ್’, ಅಮೃತ ವಿದ್ಯಾಲಯದ ಶುಭಾನ್ ಎಸ್. ಶೇಟ್ ಮತ್ತು ಜ್ಞಾನ್ ಕಾಮತ್ ‘ಆಟೊ ಪವರ್ ಜನರೇಟಿಂಗ್ ಎಲೆಕ್ಟ್ರಿಕ್ ಕಾರ್’ ಮಾದರಿ ತಂದಿದ್ದರು. ಶಕ್ತಿ ರೆಸಿಡೆನ್ಷಿಯಲ್ ಸ್ಕೂಲ್‌ನ ಶ್ರೇಷ್ಠ ನಾಯಕ್, ಶಾಸ್ತ ನಾಯಕ್ ಅವರು ತಯಾರಿಸಿದ ನೀರಾ ತೆಗೆಯುವ ‘ಎ ನಾವೆಲ್ ಡಿಸೈನ್ ಆಫ್ ಆಟೊಮ್ಯಾಟಿಕ್ ಕೋಕೊಸ್ಯಾಪ್ ಎಕ್ಸ್‌ಟ್ರ್ಯಾಕ್ಟರ್ ಮೆಷಿನ್’ ಮಾದರಿ ಮೆಚ್ಚುಗೆ ಪಡೆಯಿತು.
ಪಾಂಡೇಶ್ವರದ ಕಾರ್ಮೆಲ್ ಸ್ಕೂಲ್‌ನ ಐಶ್ವರ್ಯ, ತನುಶ್ರೀ ಅವರ ಇಸ್ರೊ ಗಗನಯಾನ– ರಾಕೆಟ್ ಲಾಂಚಿಂಗ್ ವ್ಯವಸ್ಥೆ, ಅಶೋಕ ವಿದ್ಯಾಲಯದ ನೋಯೆಲ್ ಮತ್ತು ವಿರಾಜ್ ಅವರ ‘ಲೇಸರ್ ಮೈಕ್ರೋಸ್ಕೋಪ್’, ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸೋಹಮ್ ಪೂಜಾರಿ, ತನಯ್ ರಾಜೇಶ್ ಅವರ ‘ಸ್ಮಾರ್ಟ್ ಗ್ಲಾಸ್ ಫಾರ್ ವಿಷುವಲಿ ಇಂಪ್ಯಾಕ್ಟ್ ಪೀಪಲ್’, ಕೇಂಬ್ರಿಡ್ಜ್ ಸ್ಕೂಲ್‌ನ ಅಮೋಘ್, ಹಫೀಜ್ ಅವರ ‘ಸ್ಮಾರ್ಟ್ ಟೈಲ್’, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಚಾರ್ವಿ ಪ್ರಸಾದ್ ಕೆ.ಟಿ, ಗಾರ್ಗೀ ಆಳ್ವ ಅವರ ‘ಪೋರ್ಟೆಬಲ್ ಆಕ್ಸಿಜನ್ ಜನರೇಟರ್’, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಶಾಲೆಯ ವಿಶ್ವಂಭರ, ಯತೀನ್ ಅವರ ‘ವಾಟರ್ ಲೆವೆಲ್ ಇಂಡಿಕೇಟರ್’, ಬೋಂದೆಲ್ ಸೇಂಟ್ ಲಾರೆನ್ಸ್ ಸ್ಕೂಲ್‌ನ ಮೋಕ್ಷಿತ್, ಆ್ಯರನ್ ಮೋಂತೆರೊ ಅವರ ‘ಹೈಡ್ರೋಲಿಕ್ ಆರ್ಮ್ಸ್’ ಮಾದರಿ ಗಮನ ಸೆಳೆದವು.
ಬಂಟ್ಸ್ ಹಾಸ್ಟೆಲ್‌ನ ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಾತ್ವಿಕ್ ಎಸ್, ಧ್ರುವನ್ ಅವರ ‘ಇನೋವೇಟಿವ್ ಟ್ರಾನ್ಸ್‌ಪೋರ್ಟ್ ಫಾರ್ ಎ ಸ್ಮಾರ್ಟರ್ ಗ್ರೀನರ್ ಸಿಟಿ’, ನಿಟ್ಟೆ ಡಾ.ಎನ್.ಎಸ್.ಎ.ಎಂ. ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ರಮಿತ್ ಹೆಗ್ಡೆ, ಲಿಖಿತ್ ಮಾಧವ ಅವರ ‘ಇಂಡಸ್ಟ್ರಿಯಲ್ ಹೈಡ್ರೊ ಥರ್ಮಲ್ ಎನರ್ಜಿ ಯುನಿಟ್’, ಕೋಟ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರದ್ಯಮ್ನ ಹೆಬ್ಬಾರ್, ಚಿನ್ಮಯ್ ಎಸ್. ಪೂಜಾರಿ ಅವರ ‘ಎಸ್‌ಎಂಎಸ್ ಬೇಸ್ಡ್ ಆಟೊಮೇಟೆಡ್ ಸಿಸ್ಟಂ’, ಪ್ರೆಸಿಡೆನ್ಸಿ ಸ್ಕೂಲ್‌ನ ಕೌಶಿಕ್ ಎನ್. ಖಾರ್ವಿ, ಸಾನ್ವಿಷ್ ಎಂ. ಪೂಜಾರಿ ಅವರ ‘ನೋ ವೇಸ್ಟ್ ಡಿಸ್‌ಚಾರ್ಜ್ ಪ್ಲಾಂಟ್, ಪೈಸಸ್’ ಮಾದರಿಗಳು ಭವಿಷ್ಯದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದವು.
ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ‘ಎಕ್ಸ್-ಕ್ವಿಝ್‍ಇಟ್’, ಸಂವಾದಾತ್ಮಕ ಡೆಮೊ ‘ಎಕ್ಸ್-ಸೈಟ್’, ಕೃತಕ ಬುದ್ಧಿಮತ್ತೆ ಕಾರ್ಯಾಗಾರ ‘ಎಕ್ಸ್-ಇಗ್ನೈಟ್’, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ ‘ಎಕ್ಸ್-ಝಿಬಿಟ್’ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಗಾರ ‘ಎಕ್ಸ್-ಇಗ್ನೈಟ್’ನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿ ಬಳಿಕ ಅವರೇ ಎಐ ಬಳಸಿ ಆ್ಯಪ್, ಸಾಫ್ಟ್‌ವೇರ್ ರೂಪಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಐ ಬಳಸಿ ರೂಪಿಸಬಹುದಾದ ಆ್ಯಪ್, ಸಾಫ್ಟ್‌ವೇರ್, ವಿವಿಧ ಕ್ಷೇತ್ರಗಳಲ್ಲಿ ಅದರ ಬಳಕೆ, ತಂತ್ರಜ್ಞಾನದಲ್ಲಿ ಅದನ್ನು ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಪ್ರಸ್ತುಪಡಿಸಿದರು.
ಮೆಡಿಟೆಕ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಹೆಗ್ಡೆ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರು. ಎಕ್ಸ್‌ಪರ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ನರೇಂದ್ರ ಎಲ್. ನಾಯಕ್, ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಮಾರೋಪ ಸಮಾರಂಭವನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಉದ್ಘಾಟಿಸಿದರು.
ಫಲಿತಾಂಶಗಳು ಕೇಂಬ್ರಿಜ್ ಸ್ಕೂಲ್ ಸಮಗ್ರ ಚಾಂಪಿಯನ್ ಪ್ರೆಸಿಡೆನ್ಸಿ ಸ್ಕೂಲ್ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡವು. ರಸಪ್ರಶ್ನೆ ಸ್ಪರ್ಧೆ– ಕೋಟ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಚೈತನ್ಯಶ್ರೀ ಆರ್. ಉಡುಪ ಸಾತ್ವಿಕ್ ಕುಂದರ್ ಪ್ರಥಮ ಕೇಂಬ್ರಿಜ್ ಸ್ಕೂಲ್‌ನ ಆರುಷ್ ಕಲ್ಲಸರ್ಪೆ ಅನನ್ಯಾ ಹೆಗ್ಡೆ ದ್ವಿತೀಯ. ಸಂವಾದಾತ್ಮಕ ಡೆಮೊ ಸ್ಪರ್ಧೆ ‘ಎಕ್ಸ್-ಸೈಟ್’– ಅಮೃತ ವಿದ್ಯಾಲಯದ ರಿಷಭ್ ಆರ್. ಶೆಟ್ಟಿ ಆರವ್ ತೊಟ್ಟೊನ್‌ವೀಡು ಪ್ರಥಮ ಕೇಂಬ್ರಿಜ್ ಸ್ಕೂಲ್‌ನ ಒಮಿಷಾ ಎ. ಆಳ್ವ ಗಗನ್ ವಿ. ಸಮಲಾದ್ ದ್ವಿತೀಯ. ಕೃತಕ ಬುದ್ಧಿಮತ್ತೆ– ಕೇಂಬ್ರಿಜ್ ಸ್ಕೂಲ್‌ನ ಕನೀಕಾ ಜೈನ್ ಆದ್ಯತ್ ಶೆಟ್ಟಿ ಪ್ರಥಮ ಪ್ರೆಸಿಡೆನ್ಸಿ ಸ್ಕೂಲ್‌ನ ತೇಜಸ್ ಭಟ್ ಅಭಯ್ ಅಲೋಷಿಯಸ್ ಲೋಬೊ ದ್ವಿತೀಯ. ವಿಜ್ಞಾನ ಮಾದರಿ– ಶಕ್ತಿ ರೆಸಿಡೆನ್ಷಿಯಲ್ ಸ್ಕೂಲ್‌ನ ಶ್ರೇಷ್ಠ ನಾಯಕ್ ಶಾಸ್ತ ನಾಯಕ್ ಪ್ರಥಮ (ಎ ನಾವೆಲ್ ಡಿಸೈನ್ ಆಫ್ ಆಟೊಮ್ಯಾಟಿಕ್ ಕೋಕೊಸ್ಯಾಪ್ ಎಕ್ಸ್‌ಟ್ರ್ಯಾಕ್ಟರ್ ಮೆಷಿನ್ ಮಾದರಿ) ಪ್ರೆಸಿಡೆನ್ಸಿ ಸ್ಕೂಲ್‌ನ ಕೌಶಿಕ್ ಎನ್. ಖಾರ್ವಿ ಸಾನ್ವಿಷ್ ಎಂ. ಪೂಜಾರಿ ದ್ವಿತೀಯ (ನೋ ವೇಸ್ಟ್ ಡಿಸ್‌ಚಾರ್ಜ್ ಪ್ಲಾಂಟ್ ಪೈಸಸ್ ಮಾದರಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.