ADVERTISEMENT

ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 12:40 IST
Last Updated 28 ಏಪ್ರಿಲ್ 2025, 12:40 IST

ಮಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಅಲ್‌ ವಫಾ ಚಾರಿಟಬಲ್‌ ಟ್ರಸ್ಟ್‌ ಸಾಮೂಹಿಕ ವಿವಾಹ ಹಮ್ಮಿಕೊಂಡಿದೆ. ಆಗಸ್ಟ್ 23ರಂದು ಬಂಟ್ವಾಳ ತಾಲ್ಲೂಕಿನ ನೇರಳಕಟ್ಟೆಯ ಜನಪ್ರಿಯ ಗಾರ್ಡನ್‌ ಸಭಾಂಗಣದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹಕ್ಕೆ ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸವಾಗಿರುವ ವಧುವಿನ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ವಧುವಿಗೆ ಮದುವೆಯ ವಸ್ತ್ರ, ಮೂರು ಪವನ್‌ ಚಿನ್ನಾಭರಣ ಹಾಗೂ ಮದುವೆಯ ಖರ್ಚನ್ನು ಟ್ರಸ್ಟ್‌ ಭರಿಸಲಿದೆ. ಅನಾಥ, ಅಂಗವಿಕಲ, ಆರ್ಥಿಕವಾಗಿ ಹಿಂದುಳಿದ ಹಾಗೂ ಮದುವೆಯ ವಯಸ್ಸು ಮೀರಿರುವ ವಧುವಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ನಮೂನೆ ಪಡೆಯಲು ಜೂನ್ 30ರ ಒಳಗೆ ಕೆ.ಎಸ್.‌ ಅಬೂಬಕರ್‌ (9845662169), ಪಿ. ಮುಹಮ್ಮದ್ (9743266456), ಬಿ.ಎ. ಶಕೂರ್ (9448216149) ಅವರನ್ನು ಸಂಪರ್ಕಿಸಬಹುದು ಎಂದು ಅಲ್‌ ವಫಾ ಚಾರಿಟಬಲ್‌ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಉಮರ್‌ ಯು.ಎಚ್.‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.