ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ 'ತೀಯಾ' ಎಂದೇ ನಮೂದಿಸಿ: ಸದಾಶಿವ ಉಳ್ಳಾಲ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 23:15 IST
Last Updated 19 ಸೆಪ್ಟೆಂಬರ್ 2025, 23:15 IST
<div class="paragraphs"><p>ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ</p></div>

ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ

   

ಮಂಗಳೂರು: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಬೆಳ್ಚಾಡ, ಮಲೆಯಾಳಿ ಬಿಲ್ಲವ ಸಮುದಾಯಕ್ಕೆ ಸೇರಿದವರು ಒಂಬತ್ತನೇ ಕಾಲಂನಲ್ಲಿ ‘ತೀಯಾ’ ಎಂದೇ ನಮೂದಿಸಬೇಕು’ ಎಂದು ಭಾರತೀಯ ತೀಯಾ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು, ಸಮುದಾಯದವರು ಹಿಂದೆ ಮಾಡಿದಂತೆ ತಪ್ಪು ಮಾಡಬಾರದು. ಸಮೀಕ್ಷೆಗೆ ಬರುವವರು ಸರಿಯಾಗಿ ಜಾತಿ ನಮೂದಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಸರ್ಕಾರಿ ಸೌಲಭ್ಯಗಳಿಗಾಗಿ ರಾಜ್ಯದಲ್ಲಿರುವ 4 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ತೀಯಾ ಸಮಾಜದವರು ಜನಬಲ ತೋರಿಸಬೇಕಿದೆ’ ಎಂದು ತಿಳಿಸಿದರು. 

ADVERTISEMENT

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಮುಖಂಡರಾದ ರಾಜ್‌ಗೋಪಾಲ್, ದಿನೇಶ್ ಕುಂಪಲ, ಚಿದಾನಂದ ಗುರಿಕಾರ, ಉಮೇಶ್, ಸುರೇಶ್ ಭಟ್ನಗರ, ವಿಶ್ವನಾಥ, ಪ್ರೇಮ್‌ಚಂದ್, ಜಯಂತ್ ಕೊಂಡಾಣ, ರಾಕೇಶ್, ಮೋನಪ್ಪ ಮಜಿ, ಸರಳಾ ನಾಗೇಶ್, ಸುಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.