ADVERTISEMENT

ಕ್ರಮ ಮನೆ ತೆರವು : ಮಹಿಳೆ ಅಸ್ವಸ್ಥ

ಸರ್ಕಾರಿ ಸ್ಥಳದಲ್ಲಿ ನಿರ್ಮಿಸಲಾದ ಅಕ್ರಮ ಮನೆ ತೆರವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 15:34 IST
Last Updated 3 ಜುಲೈ 2018, 15:34 IST
ಪುತ್ತೂರು ನಗರಸಭೆಯ ವ್ಯಾಪ್ತಿಯ ಬಲ್ನಾಡು ಗ್ರಾಮದ ಸಂಕದಮೂಲೆ ಎಂಬಲ್ಲಿ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯನ್ನು ನಗರಸಭೆಯವರು ಮಂಗಳವಾರ ತೆರವುಗೊಳಿಸಿದರು.
ಪುತ್ತೂರು ನಗರಸಭೆಯ ವ್ಯಾಪ್ತಿಯ ಬಲ್ನಾಡು ಗ್ರಾಮದ ಸಂಕದಮೂಲೆ ಎಂಬಲ್ಲಿ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಯನ್ನು ನಗರಸಭೆಯವರು ಮಂಗಳವಾರ ತೆರವುಗೊಳಿಸಿದರು.   

ಪುತ್ತೂರು: ಬಲ್ನಾಡು ಗ್ರಾಮದ ಸುಂಕದಮೂಲೆ ಎಂಬಲ್ಲಿ ಸರ್ಕಾರಿ ಸ್ಥಳದಲ್ಲಿ ಸಿಮೆಂಟ್ ಶೀಟು ಅಳವಡಿಸಿ ನಿರ್ಮಿಸಲಾಗಿದ್ದ ಅಕ್ರಮ ಮನೆಯನ್ನು ಮಂಗಳವಾರ ನಗರಸಭೆ ಅಧಿಕಾರಿಗಳು ಪೊಲೀಸ್ ಬಲದೊಂದಿಗೆ ತೆರವುಗೊಳಿಸಿದರು. ತೆರವು ಕಾರ್ಯ ವಿರೋಧಿಸಿ ರಾದ್ದಾಂತ ಸೃಷ್ಟಿಸಿದ ಮಹಿಳೆ ಅಸ್ವಸ್ಥರಾಗಿದ್ದಾರೆ.

ನಗರಸಭೆಗೆ ಹಸ್ತಾಂತರಗೊಂಡಿರುವ ಸುಮಾರು 2.5 ಎಕರೆ ಖಾಲಿ ಗುಡ್ಡ ಸ್ಥಳ ಬಲ್ನಾಡು ಗ್ರಾಮದ ಸಂಕದಮೂಲೆ ಎಂಬಲ್ಲಿ ಇದ್ದು, ಈ ಸರ್ಕಾರಿ ಸ್ಥಳದಲ್ಲಿ ಬಲ್ನಾಡು ಆಶ್ರಯ ಕಾಲೋನಿಯಲ್ಲಿ ವಾಸ್ತವ್ಯವಿರುವ ಸದ್ದಾಂ ಅವರ ಪತ್ನಿ ಸಫಿಯಾ ಅವರು ಪುತ್ತೂರಿನ ಬಪ್ಪಳಿಗೆಯಲ್ಲಿ ಬಾಡಿಗೆ ಮನೆಯಲ್ಲಿರುವ ತನ್ನ ಪುತ್ರಿ ಮಿಶ್ರಯ ಮತ್ತು ಅಳಿಯ ಫಾರೂಕ್ ಅವರ ವಾಸ್ತವ್ಯಕ್ಕಾಗಿ ಅಕ್ರಮವಾಗಿ ಮನೆ ನಿರ್ಮಿಸಿದ್ದರು.

ಸೋಮವಾರ ಹಗಲು ಮನೆ ಅಕ್ರಮವಾಗಿ ನಿರ್ಮಾಣದ ಮಾಹಿತಿಯಂತೆ ನಗರಸಭೆಯ ಅಧಿಕಾರಿಗಳು ಅಲ್ಲಿಗೆ ತೆರಳಿ ಅದನ್ನು ತೆರವುಗೊಳಿಸಬೇಕೆಂದು ಎಚ್ಚರಿಕೆ ನೀಡಿ ಬಂದಿದ್ದರು. ಆದರೆ ಮಂಗಳವಾರ ಮನೆಗೆ ಸಿಮೆಂಟ್ ಶೀಟು ಅಳವಡಿಸಿ ಮಹಿಳೆಯೊಬ್ಬರು ವಾಸ್ತವ್ಯ ಹೂಡಿದ್ದರು. ಈ ಮಾಹಿತಿ ಅರಿತ ನಗರಸಭೆಯ ಅಧಿಕಾರಿಗಳು ಪೊಲೀಸರೊಂದಿಗೆ ಬುಧವಾರ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು, ಆ ಮನೆಯ ತೆರವು ಕಾರ್ಯಾಚರಣೆ ನಡೆಸಿದರು.

ADVERTISEMENT

ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರ ನೇತೃತ್ವದಲ್ಲಿ ಸಹಾಯಕ ಕಾರ್ಯನಿವಾಹಕ ಎಂಜಿನಿಯರ್‌ ಪುರಂದರ ಕೋಟ್ಯಾನ್, ಕಿರಿಯ ಅಭಿಯಂತರ ದಿವಾಕರ್, ಸಹಾಯಕ ಅಭಿಯಂತರ ಅರುಣ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ರಾಮಚಂದ್ರ, , ಸಂಪ್ಯ ಪೊಲೀಸ್ ಠಾಣೆಯ ಎಎಸ್ಐ ತಿಮ್ಮಯ್ಯ ತಣಂಡದಿಂದ ಕಾರ್ಯಾಚರಣೆ ನಡೆಯಿತು.

ಮಹಿಳೆ ಅಸ್ವಸ್ಥ: ಮನೆಯೊಳಗಿದ್ದ ಸಫಿಯಾ ಮತ್ತು ಅವರ ತಂಗಿಯ ಪುತ್ರ ಮುಸ್ತಾ ಎಂಬವರು ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಸಫಿಯಾ ಅವರು ಮನೆಯೊಳಗಿದ್ದ ಹಾಗೆಯೇ ನಗರಸಭೆ ಕಾರ್ಮಿಕರು ಮನೆತೆರವು ಕಾಯರ್ಾಚರಣೆ ಮಾಡಿದರು. ಸಿಮೆಂಟ್ ಶೀಟುಗಳನ್ನು ಕಿತ್ತು, ಕಲ್ಲುಗಳನ್ನು ತೆರವು ಮಾಡಿದರು.ಸಫಿಯಾ ಅವರು ಮನೆಯಿಂದ ಹೊರಗೆ ಬಂದು ಮಣ್ಣಿನಲ್ಲಿ ಕೌಚಿ ಮಲಗಿ, ಅಸ್ವಸ್ಥರಾದರು. ಪುತ್ರಿ ಮತ್ತು ಅಳಿಯ ಬಂದ ಬಳಿಕ ನಗರಸಭೆ ವತಿಯಿಂದ ಅವರನ್ನು 108 ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಂಗಲಾಚಿದ ಕುಟುಂಬ: ನಗರಸಭೆಯವರು ಮನೆ ತೆರವು ಕಾರ್ಯಾಚರಣೆಗೆ ಮುಂದಾದ ವೇಳೆ ಸಫಿಯಾ ಅವರು ಮನೆ ತೆರವುಗೊಳಿಸಬೇಡಿ. ನಾವು ಬಡವರು. ಒಂದು ದಿನದ ಅವಕಾಶ ಕೊಡಿ. ನನ್ನ ಅಳಿಯ ಮತ್ತು ಪುತ್ರಿ ಮನೆಯ ದಾಖಲೆಪತ್ರ ಹಿಡಿದುಕೊಂಡು ಉಪವಿಭಾಗಾಧಿಕಾರಿ ಕಚೇರಿಗೆ ಹೋಗಿದ್ದಾರೆ ಎಂದು ಅಂಗಲಾಚಿದರು. ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಿಸುವುದು ಕಾನೂನು ಪ್ರಕಾರ ತಪ್ಪು. ನಾವು ತೆರವುಗೊಳಿಸದಿದ್ದರೆ ನಮ್ಮ ನನ್ನ ಮೇಲೆ ಮೇಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದರು. ಮನೆ ಸದಸ್ಯೆ ಮಿಶ್ರಿಯಾ ಅವರು ‘ನಗರಸಭೆಯ ಅಧ್ಯಕ್ಷರೇ ಮನೆ ನಿರ್ಮಿಸಲು ಹೇಳಿದ್ದು’ ಎಂಬ ವಿಚಾರವನ್ನು ಪೌರಾಯುಕ್ತರ ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.