ADVERTISEMENT

ಶಿರ್ತಾಡಿ: ಕಾರಿನಲ್ಲಿದ್ದ ₹ 5 ಲಕ್ಷ ನಗದು ಕಳವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 14:23 IST
Last Updated 1 ಜೂನ್ 2024, 14:23 IST
ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಶುಕ್ರವಾರ ನಿಲ್ಲಿಸಿದ್ದ ಕಾರಿನಿಂದ ₹ 5 ಲಕ್ಷ ನಗದು ಕಳವು ಆರೋಪಿಗಳ ಪತ್ತೆಗೆ ಆಗ್ರಹಿಸಿ ಶಿರ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗ್ನೇಸ್‌ ಡಿಸೋಜ ನೇತೃತ್ವದಲ್ಲಿ ಶನಿವಾರ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು
ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಶುಕ್ರವಾರ ನಿಲ್ಲಿಸಿದ್ದ ಕಾರಿನಿಂದ ₹ 5 ಲಕ್ಷ ನಗದು ಕಳವು ಆರೋಪಿಗಳ ಪತ್ತೆಗೆ ಆಗ್ರಹಿಸಿ ಶಿರ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗ್ನೇಸ್‌ ಡಿಸೋಜ ನೇತೃತ್ವದಲ್ಲಿ ಶನಿವಾರ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು   

ಮೂಡುಬಿದಿರೆ: ಶಿರ್ತಾಡಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ನಿಲ್ಲಿಸಿದ್ದ ಕಾರಿನಿಂದ ₹ 5 ಲಕ್ಷ ನಗದು ಕಳವಾಗಿದೆ.

ಸಿವಿಲ್ ಗುತ್ತಿಗೆದಾರರಿಗೆ ಅಜಯ್ ಎಂಬುವರಿಗೆ ಸೇರಿದ ಹಣವನ್ನು ಕಳವು ಮಾಡಲಾಗಿದೆ. ಬ್ಯಾಂಕ್‌ನಿಂದ ನಗದೀಕರಿಸಿದ ಹಣದೊಂದಿಗೆ ಕಾರಿನಲ್ಲಿ ಶಿರ್ತಾಡಿಗೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಕಾರು ನಿಲ್ಲಿಸಿ ಪಕ್ಕದ ಹೋಟೆಲ್‌ಗೆ ತೆರಳಿದ್ದರು. ವಾಪಸ್‌ ಬರುವಷ್ಟರಲ್ಲಿ ಹಣ ಕಳವಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಹಣ ಕಳವು ಮಾಡಿ ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರಿಗೆ ಮನವಿ: ಹಗಲಲ್ಲೇ ನಡೆದಿರುವ ಕಳವು ಪ್ರಕರಣ ಜನರಲ್ಲಿ ಭೀತಿ ಉಂಟು ಮಾಡಿದ್ದು, ಆರೋಪಿಗಳನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಶಿರ್ತಾಡಿ ಗ್ರಾಮ ಪಂಚಾಯಿತಿ ವತಿಯಿಂದ ಮೂಡುಬಿದಿರೆ ಪೊಲೀಸರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ADVERTISEMENT

ಪಂಚಾಯಿತಿ ಅಧ್ಯಕ್ಷೆ ಆಗ್ನೇಸ್‌ ಡಿಸೋಜ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸದಸ್ಯ ಪ್ರವೀಣ್ ಕುಮಾರ್, ಪತ್ರಕರ್ತ ನವೀನ್ ಸಾಲ್ಯಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.