ADVERTISEMENT

ಬಂಟ್ವಾಳ: ವಿವಿಧೆಡೆ ಸಂಭ್ರಮದ ತೆನೆಹಬ್ಬ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:17 IST
Last Updated 8 ಸೆಪ್ಟೆಂಬರ್ 2023, 14:17 IST
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚ್‌ನಲ್ಲಿ ತೆನೆಹಬ್ಬ (ಮೋಂತಿ ಫೆಸ್ಟ್ ) ಸಂಭ್ರಮದಿಂದ ಶುಕ್ರವಾರ ನಡೆಯಿತು
ಬಂಟ್ವಾಳ ತಾಲ್ಲೂಕಿನ ಲೊರೆಟ್ಟೋ ಮಾತಾ ಚರ್ಚ್‌ನಲ್ಲಿ ತೆನೆಹಬ್ಬ (ಮೋಂತಿ ಫೆಸ್ಟ್ ) ಸಂಭ್ರಮದಿಂದ ಶುಕ್ರವಾರ ನಡೆಯಿತು   

ಬಂಟ್ವಾಳ: ಇಲ್ಲಿನ ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಮೇರಿ ಕನ್ಯಾ ಮಾತೆ ಜನ್ಮ ದಿನಾಚರಣೆ ಅಂಗವಾಗಿ ಕ್ರೈಸ್ತರು ಸಂಭ್ರಮದಿಂದ ತೆನೆಹಬ್ಬ (ಮೊಂತಿ ಫೆಸ್ತ್ ) ಆಚರಿಸಿಕೊಂಡರು.

ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಮುಖ್ಯಶಿಕ್ಷಕ ಜೇಸನ್ ಮೋನಿಸ್, ಪ್ರಧಾನ ಧರ್ಮಗುರು ಪ್ರತಾಪ್ ನಾಯಕ್ ಬಲಿಪೂಜೆ ನೆರವೇರಿಸಿದರು.

9 ದಿನಗಳಿಂದ ನಡೆದ ಮಾತೆ ಮರಿಯಮ್ಮನ ‘ನೊವೆನಾ ಪ್ರಾರ್ಥನೆ’ಗೆ ಹೂ ಸಮರ್ಪಿಸಿದ ಮಕ್ಕಳಿಗೆ ಸಿಹಿತಿಂಡಿ, ಭಕ್ತರಿಗೆ ಕಬ್ಬು ಮತ್ತು ಭತ್ತದ ತೆನೆ ವಿತರಿಸಲಾಯಿತು.

ADVERTISEMENT

ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ಮೆರವಣಿಗೆ ಸಹಿತ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಶಿಕ್ಷಣ ನಿರ್ದೇಶಕ ಧರ್ಮಗುರು ವಿಜಯ್ ಮಚಾದೊ ಬಲಿಪೂಜೆ ನೆರವೇರಿಸಿದರು.

ಭಕ್ತರಿಗೆ ಭತ್ತದ ತೆನೆ, ಕಬ್ಬು, ಪಾಯಸ, ಅತಿ ಹೆಚ್ಚು ಹೂ ತಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಧರ್ಮಗುರು ಫ್ರೆಡ್ರಿಕ್ ಮೊಂತೆರೊ ಶುಭ ಹಾರೈಸಿದರು. ಧರ್ಮಗುರು ಪ್ರಶಾಂತ್ ಪಿಂಟೊ, ಚರ್ಚ್‌ ಉಪಾಧ್ಯಕ್ಷ ನವೀನ್ ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನಾ ಇದ್ದರು.

ತಾಲ್ಲೂಕಿನ ಅಮ್ಟೂರು, ಫರಂಗಿಪೇಟೆ, ಮಾಣಿ, ಶಂಭೂರು, ಕರಿಮಲೆ, ಸಿದ್ಧಕಟ್ಟೆ, ನೈನಾಡು, ವಗ್ಗ ಚರ್ಚ್‌ಗಳಲ್ಲೂ ಹಬ್ಬ ಆಚರಿಸಲಾಯಿತು.

ಬಂಟ್ವಾಳ ತಾಲ್ಲೂಕಿನ ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ಮೇರಿ ಕನ್ಯಾ ಮಾತೆ ಜನ್ಮದಿನ ಪ್ರಯುಕ್ತ ಮೆರವಣಿಗೆ ತೆನೆಹಬ್ಬ  ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.