ADVERTISEMENT

ಮೂಲ್ಕಿ: ತಗ್ಗಿದ ನೆರೆ, ಕಾಳಜಿ ಕೇಂದ್ರ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:54 IST
Last Updated 17 ಜೂನ್ 2025, 13:54 IST
ಮೂಲ್ಕಿ ತಾಲ್ಲೂಕಿನ ಮೆನ್ನಬೆಟ್ಟು ಗ್ರಾಮದ ಜಯಶ್ರೀ ಎಂಬವರ ಮನೆಗೆ ಹಾನಿಯಾಗಿರುವುದು 
ಮೂಲ್ಕಿ ತಾಲ್ಲೂಕಿನ ಮೆನ್ನಬೆಟ್ಟು ಗ್ರಾಮದ ಜಯಶ್ರೀ ಎಂಬವರ ಮನೆಗೆ ಹಾನಿಯಾಗಿರುವುದು    

ಮೂಲ್ಕಿ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಸಾಕಷ್ಟು ಆತಂಕಗೊಂಡಿದ್ದ ಜನರಿಗೆ ಮಂಗಳವಾರ ಮಳೆ ತುಸು ಕಡಿಮೆಯಾಗಿರುವುದು ಸಮಾಧಾನ ತಂದಿದೆ. ನದಿಯ ಸುತ್ತಮುತ್ತ ಇದ್ದ ನೆರೆ ನೀರು ತಗ್ಗಿದ್ದು, ಕಾಳಜಿ ಕೇಂದ್ರವನ್ನು ಮುಂದುವರಿಸಲಾಗಿದೆ.

ಮೂಲ್ಕಿ ತಾಲ್ಲೂಕಿನ ಮೆನ್ನಬೆಟ್ಟು ಗ್ರಾಮದ ಜಯಶ್ರೀ ಅವರ ಮನೆಯ ಪಕ್ಕದ ಮನೆಯ ಗೋಡೆಯು ಕುಸಿದು ಬಿದ್ದಿದ್ದರಿಂದ ಮೇಲ್ಛಾವಣಿ ಹಾಗೂ ಮನೆಯ ಗೋಡೆಗೆ ಹಾನಿಯಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT