ADVERTISEMENT

ಗ್ರಾಮೀಣ ಕಂಬಳಕ್ಕೂ ಹೆಚ್ಚು ಅನುದಾನ | ಸಿಎಂಗೆ ಮನವಿ: ಸಚಿವ ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 12:36 IST
Last Updated 27 ಫೆಬ್ರುವರಿ 2024, 12:36 IST
ಬಿ.ರಮಾನಾಥ ರೈ
ಬಿ.ರಮಾನಾಥ ರೈ   

ಬಂಟ್ವಾಳ: ಬೆಂಗಳೂರಿನಲ್ಲಿ ನಡೆದ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1.50 ಕೋಟಿ ಅನುದಾನ ಒದಗಿಸಿದ್ದಾರೆ. ಇದೀಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡುತ್ತಿರುವ ಒಟ್ಟು ₹ 1 ಕೋಟಿ ಅನುದಾನದಲ್ಲಿ ಪ್ರತಿ ಕಂಬಳಕ್ಕೆ ತಲಾ ₹ 5 ಲಕ್ಷ ಅನುದಾನ ಸಿಗುತ್ತಿದೆ. ಈ ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ‘ಬಂಟ್ವಾಳ ಮೂಡೂರು-ಪಡೂರು ಕಂಬಳ’ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

‘ಪ್ರತೀ ಕಂಬಳ ಆಯೋಜನೆಗೆ ಸುಮಾರು ₹ 10ರಿಂದ 15 ಲಕ್ಷ ವೆಚ್ಚ ತಗುಲುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ಹೊನಲು ಬೆಳಕಿನ ಜೋಡುಕರೆ ಬಯಲು ಕಂಬಳಗಳು ಪ್ರತಿ ವರ್ಷ ನಡೆಯುತ್ತಿದ್ದು, ಜಿಲ್ಲೆಯ ಪಿಲಿಕುಳ ಮತ್ತು ಮೂಡುಬಿದಿರೆಯಲ್ಲಿ ಮಾತ್ರ ಸರ್ಕಾರಿ ಪ್ರಾಯೋಜಿತ ಕಂಬಳ ನಡೆಯುತ್ತಿದೆ. ಉಳಿದಂತೆ ಕೃಷಿಕರು ಮತ್ತು ಕಂಬಳಾಸಕ್ತರು ಸೇರಿಕೊಂಡು ಕಂಬಳ ಆಯೋಜಿಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ನೆರವು ಸಿಕ್ಕಿದಾಗ ಕಂಬಳ ಆಯೋಜಿಸಲು ಸಹಕಾರಿಯಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT