ADVERTISEMENT

ಎಂಆರ್‌ಪಿಎಲ್‌: ಹಾರ್ನ್‌ಬಿಲ್‌ ಕಲರವ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:08 IST
Last Updated 4 ಅಕ್ಟೋಬರ್ 2022, 6:08 IST
ಎಂಆರ್‌ಪಿಎಲ್ ಆವರಣದಲ್ಲಿ ಕಂಡುಬಂದ ಮಲಬಾರ್ ಪೈಡ್ ಹಾರ್ನ್‌ಬಿಲ್
ಎಂಆರ್‌ಪಿಎಲ್ ಆವರಣದಲ್ಲಿ ಕಂಡುಬಂದ ಮಲಬಾರ್ ಪೈಡ್ ಹಾರ್ನ್‌ಬಿಲ್   

ಮಂಗಳೂರು: ಇಲ್ಲಿನ ಎಂಆರ್‌ಪಿಎಲ್‌ ಆವರಣ ದಲ್ಲಿ ಮಲಬಾರ್ ಪೈಡ್ ಹಾರ್ನ್‌ ಬಿಲ್‌ಗಳು ಸಮಾವೇಶಗೊಳ್ಳುವ ಮೂಲಕ ಚಳಿಗಾಲದ ಹಕ್ಕಿಗಳ ಋತುವಿಗೆ ಮುನ್ನುಡಿ ಬರೆದಿವೆ.

ಸುಮಾರು 50ರಷ್ಟು ಹಾರ್ನ್‌ಬಿಲ್‌ಗಳು ಎಂಆರ್‌ಪಿಎಲ್ ರಿಫೈನರಿ ಕಾಂಪ್ಲೆಕ್ಸ್ ಮತ್ತು ಟೌನ್‌ಷಿಪ್ ಆವರಣದಕ್ಕೆ ಬಂದಿರುವುದನ್ನು ಈಚೆಗೆ ಗುರುತಿಸಲಾಗಿದೆ.ಉಷ್ಣವಲಯದ ಮರಗಳ ಬೀಜಗಳನ್ನು ಪ್ರಸರಣ ಮಾಡುವಲ್ಲಿ ಹಾರ್ನ್‌ಬಿಲ್‌ಗಳ ಪಾತ್ರ ಮಹತ್ವದ್ದಾಗಿದೆ. ಎಂಆರ್‌ಪಿಎಲ್ ಅಭಿವೃದ್ಧಿಪಡಿಸಿರುವ ಸುಮಾರು 500 ಎಕರೆ ಹಸಿರು ಪ್ರದೇಶವು ವಿವಿಧ ಜಾತಿಯ ಸಸ್ಯಗಳು, ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ. ಪಕ್ಷಿಗಳ ಋತುವಿನಲ್ಲಿ ಅನೇಕ ಹಕ್ಕಿಗಳು ಸಂತಾನೋತ್ಪತ್ತಿಗೆ ಈ ನೆಲೆ ಸುರಕ್ಷಿತ ಎಂಬುದನ್ನು ಕಂಡುಕೊಂಡಿವೆ. ಹಸಿರು ವಲಯದೊಳಗಿನ ಜಲಮೂಲದಲ್ಲಿ 150ಕ್ಕೂ ಹೆಚ್ಚು ಬಗೆಯ ಹಕ್ಕಿಗಳು ನಿಯಮಿತವಾಗಿ ಬರುತ್ತವೆ. ಎರಡು ಬಿಳಿ ಹೊಟ್ಟೆಯ ಕಡಲ ಹದ್ದುಗಳು ಪ್ರತಿದಿನ ಸಂಸ್ಕರಣಾಗಾರಕ್ಕೆ ಭೇಟಿ ನೀಡುತ್ತವೆ.

ರೋಸಿ ಸ್ಟಾರ್ಲಿಂಗ್‌ಗಳು, ಯುರೋಪಿಯನ್ ರೋಲರ್, ಸೈಬೀರಿಯನ್ ಸ್ಟೋನ್‌ಚಾಟ್, ಫ್ಲೈ ಕ್ಯಾಚರ್‌ಗಳು, ಬಂಟಿಂಗ್‌ಗಳು ಮತ್ತು ವ್ಯಾಗ್‌ಟೈಲ್‌ಗಳ ವಾರ್ಬ್ಲರ್‌ಗಳು ಇಲ್ಲಿಗೆ ವಲಸೆ ಬರುವುದನ್ನು ಈ ಹಿಂದೆ ಪಕ್ಷಿ ವೀಕ್ಷಣೆಯ ವೇಳೆ ಗುರುತಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.