ADVERTISEMENT

ಕಪ್ಪು ಶಿಲೀಂಧ್ರ: ನಿರಂತರ ಶೂನ್ಯಕ್ಕೆ ಕುಸಿದ ಪ್ರಕರಣ

57ಕ್ಕೆ ಏರಿದ್ದ ಕಪ್ಪುಶಿಲೀಂಧ್ರ ಬಾಧೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 8:14 IST
Last Updated 8 ಜೂನ್ 2021, 8:14 IST
   

ಮಂಗಳೂರು: ಜಿಲ್ಲೆಯಲ್ಲಿ ವಾರಗಳ ಅಂತರದಲ್ಲಿ ಒಮ್ಮೆಲೇ 57ಕ್ಕೆ ಏರಿದ್ದ ಕಪ್ಪು ಶಿಲೀಂಧ್ರ ಬಾಧೆ, ಪ್ರಕರಣ, ಸೋಮವಾರವೂ ಸೇರಿದಂತೆ ಕೆಲವು ದಿನಗಳಿಂದ ನಿರಂತರ ‘ಶೂನ್ಯ’ ಪ್ರಕರಣ ದಾಖಲಾಗಿದ್ದು, ಜನರಿಗೆ ತುಸು ನೆಮ್ಮದಿ ಎನ್ನುವಂತಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 57 ಕಪ್ಪು ಶಿಲೀಂಧ್ರ ಬಾಧಿತ ಪ್ರಕರಣ ದಾಖಲಾಗಿದ್ದು, ಸದ್ಯ 50 ಸಕ್ರಿಯ ಪ್ರಕರಣಗಳಿವೆ. ಅವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರು 11 ಮಂದಿ ಮಾತ್ರ. ಉಳಿದ 39 ಮಂದಿ ಹೊರ ಜಿಲ್ಲೆಗಳಿಂದ ಬಂದು ಇಲ್ಲಿನ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಒಟ್ಟು 7 ಮಂದಿ ಮೃತಪಟ್ಟಿದ್ದು, ಜಿಲ್ಲೆಯ 2 ಮಂದಿ ಹಾಗೂ ಹೊರ ಜಿಲ್ಲೆಗಳ 5 ಮಂದಿ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋವಿಡ್‌ ಬಾಧೆ ಹೆಚ್ಚಿದ್ದರೆ, ಕಪ್ಪು ಶಿಲೀಂದ್ರ ಪ್ರಕರಣ ಹೆಚ್ಚಿರಬೇಕೆಂದೇನೂ ಇಲ್ಲ. ಕಡಿಮೆ ಆಗಬಹುದು. ಇವೆರಡೂ ಭಿನ್ನ. ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಈ ಶಿಲೀಂದ್ರ ಬಾಧೆ ಆಗುತ್ತಿದೆ. ಭಯ ಬೇಡ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.