ADVERTISEMENT

ಮೂಲ್ಕಿ: ಬಪ್ಪನಾಡು ದೇವಳದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 13:12 IST
Last Updated 23 ಜೂನ್ 2025, 13:12 IST
ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಾಲನೆ ನೀಡಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು
ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಾಲನೆ ನೀಡಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು   

ಮೂಲ್ಕಿ: ಇಲ್ಲಿನ ಬಪ್ಪನಾಡು ದೇವಳದಲ್ಲಿ ಪ್ರಶ್ನಾ ಚಿಂತನೆ ನಡೆಸುವ ಪೂರ್ವಭಾವಿಯಾಗಿ ಸೋಮವಾರ ದೇವಸ್ಥಾನದ ದೇವಿಯ ಸನ್ನಿಧಾನದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಗೆ ಚಾಲನೆ ನೀಡಲಾಯಿತು.

ಬಪ್ಪನಾಡು ಜ್ಞಾನಮಂದಿರದಲ್ಲಿ ದೈವಜ್ಞ ವಳಕುಂಜ ಮುರಳೀಧರ ಭಟ್‌ ನಿರ್ದೇಶನದಲ್ಲಿ ನಡೆದ ಪ್ರಶ್ನಾ ಚಿಂತನೆಯನ್ನು ನಾರಾಯಣ ಪುದುವಾಳ್ ಪಯ್ಯನ್ನೂರು ನಡೆಸಿಕೊಟ್ಟರು. ವಳಕುಂಜ ವೆಂಕಟರಮಣ ಭಟ್ ಅವರು ಅನುವಾದಕರಾಗಿದ್ದರು. ಪ್ರಶ್ನಾ ಚಿಂತನೆ ಮಂಗಳವಾರವೂ ಮುಂದುವರಿಯಲಿದೆ.

ದೇವಳದ ಅನುವಂಶಿಕ ಮೊಕ್ತೇಸರ ಎಂ.ದುಗ್ಗಣ್ಣ ಸಾವಂತರು, ಸಿಇಒ ಶ್ವೇತಾ ಪಳ್ಳಿ, ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಪ್ರಮುಖರಾದ ಹರಿಕೃಷ್ಣ ಪುನರೂರು, ಗೌತಮ್ ಜೈನ್, ಭುವನಾಭಿರಾಮ ಉಡುಪ, ಕೊಲ್ನಾಡುಗುತ್ತು ರಾಮಚಂದ್ರ ನಾಯಕ್, ಶರತ್‌ಕುಮಾರ್, ಅತುಲ್ ಕುಡ್ವ, ವಾಸುದೇವ ರಾವ್ ಪಾವಂಜೆ, ಸುನಿಲ್ ಆಳ್ವ, ಸತೀಶ್ ಅಂಚನ್, ಸುಜಿತ್ ಸಾಲ್ಯಾನ್, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ, ಚಂದ್ರಶೇಖರ್ ಕಾಶಪ್ಪಯ್ಯ ಮನೆ, ಕಿರಣ್‌ಕುಮಾರ್ ಶೆಟ್ಟಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.