ADVERTISEMENT

ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 14:38 IST
Last Updated 9 ಆಗಸ್ಟ್ 2024, 14:38 IST
ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು
ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು   

ಬೆಳ್ತಂಗಡಿ: ಇಲ್ಲಿನ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕ್ಷೇತ್ರದ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆದ ಬಳಿಕ ಕ್ಷೇತ್ರದ ಒಳಗಿರುವ ನಾಗನ ಮೂಲ ಸನ್ನಧಿ(ಹುತ್ತಕ್ಕೆ) ಕ್ಷೀರಾಭಿಷೇಕ ನೆರವೇರಿಸಿ, ತಂಬಿಲಸೇವೆ, ಪೂಜೆ ನಡೆಸಲಾಯಿತು.

ಕ್ಷೇತ್ರದ ನಾಗನಕಟ್ಟೆಯಲ್ಲಿ‌ ಕ್ಷೀರಾಭಿಷೇಕ, ತಂಬಿಲ ಸೇವೆ, ವಿಶೇಷ ಪೂಜೆ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ADVERTISEMENT

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಡ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ವ್ಯವಸ್ಥಾಪನ ಸಮತಿ ಮಾಜಿ ಅಧ್ಯಕ್ಷರಾದ ವಸಂತ ಮಜಲು, ಭುವನೇಶ್ ಗೇರುಕಟ್ಟೆ, ಮಾಜಿ ಸದಸ್ಯರಾದ ಅಂಬಾ ಆಳ್ವ, ದಿನೇಶ್ ಗೌಡ, ರಾಜೇಶ್ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.