ADVERTISEMENT

ನಾರಾಯಣ ಗುರುಗಳ ಸ್ತಬ್ಧಚಿತ್ರ: ಪುನರ್ ಪರಿಶೀಲನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 5:13 IST
Last Updated 17 ಜನವರಿ 2022, 5:13 IST
ಬ್ರಹ್ಮಾನಂದ ಸ್ವಾಮೀಜಿ
ಬ್ರಹ್ಮಾನಂದ ಸ್ವಾಮೀಜಿ   

ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪುನರ್ ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

‘ಕೇರಳದಲ್ಲಿ ಜನರು ಅಶ್ಪೃಶ್ಯದ ಪೈಶಾಚಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ ದ್ವಂದ್ವ, ಗೊಂದಲ, ಆಶಾಂತಿಯನ್ನು ಎಬ್ಬಿಸದೆ ವೇದ ಉಪ ನಿಷತ್ತುಗಳ ಶಾಂತಿಮಂತ್ರದ ಸಿದ್ಧಾಂತ ದಂತೆ ಸಮಾಜವನ್ನು ಪರಿವರ್ತಿಸಿದ ಮಹಾನ್ ದಾರ್ಶನಿಕರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಅಂತಹ ಗುರುಗಳಿಗೆ ಇಂದು ವಿಶ್ವದ ಮೂಲೆ ಮೂಲೆಯಲ್ಲಿ ಪೂಜೆ ನಡೆಯುತ್ತಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಜಗತ್ತಿಗೆ ತಿಳಿಸಿ’

ADVERTISEMENT

ಬೆಳ್ತಂಗಡಿ: ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಮಾಡಿ ವಿಶ್ವಮಾನವ ಸಿದ್ಧಾಂತ ವನ್ನು ಜಗತ್ತಿಗೆ ತಿಳಿಸಿಕೊಡಬೇಕು ಎಂದು ಗೆಜ್ಜೆಗಿರಿ ಕ್ಷೇತ್ರಡಾಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.

‘ಜಾತಿ ಭೇದ, ಮತದ್ವೇಷ ಇಲ್ಲದ ಸರ್ವ ಸಮಾನತೆಯ ನಾರಾಯಣಗುರು ಧರ್ಮ ಪರಿಪಾಲನೆ ಮಾಡುವ ಕೋಟ್ಯಂತರ ಗುರುಭಕ್ತರ ಭಾವನೆಗಳಿಗೆ ಕೇಂದ್ರ ನಿರ್ಧಾರದಿಂದ ನೋವು ಉಂಟು ಮಾಡಿದೆ ಎಂದು ಹೇಳಿದ್ದಾರೆ.

‘ವಾಸ್ತವಾಂಶ ತಿಳಿಸಿ’

ಮಂಗಳೂರು: ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರಕ್ಕೆ ಸಂಬಂಧಿಸಿದಂತೆ ವಾಸ್ತವಾಂಶವನ್ನು ಕೇಂದ್ರ ಸರ್ಕಾರವು ಜನರ ಮುಂದಿಡಬೇಕೆಂದು ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ನಾರಾಯಣ ಗುರುಗಳು ಜಾತಿ- ಭೇದವನ್ನು ಮೀರಿದ ಮಹಾನ್ ಗುರು. ಇಂತಹ ಪರಮ ಗುರುವಿನ ಅಪಮಾನ ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ. ಕೂಡಲೇ ಕೇಂದ್ರ ಸರ್ಕಾರ ಸತ್ಯಾಂಶವನ್ನು ಜನರ ಮುಂದಿಟ್ಟು ಗೊಂದಲ ನಿವಾರಣೆ ಮಾಡಬೇಕು. ದುರುದ್ದೇಶದಿಂದ ಈ ಕ್ರಮ ಕೈಗೊಂಡಿ ದ್ದರೆ ಅದು ಖಂಡನೀಯ ಎಂದಿದ್ದಾರೆ.

ವಿಷಾದನೀಯ

‘ನಾರಾಯಣ ಗುರು ಸ್ತಬ್ಧಚಿತ್ರವನ್ನು ತಿರಸ್ಕರಿಸಿ ಆದಿಶಂಕರಾಚಾರ್ಯರ ಸ್ತಬ್ಧಚಿತ್ರ ಇಡಬೇಕೆಂದು ಕೇಂದ್ರ ಸೂಚಿಸಿರುವುದು ಮಹಾನ್ ಸಂತರನ್ನು ಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಂಕರಾಚಾರ್ಯರ ಅದ್ವೈತವನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿ ದವರು ನಾರಾಯಣ ಗುರುಗಳು. ಈ ಮಹಾನ್ ಆತ್ಮಜ್ಞಾನಿಗಳ ನಡುವೆ ಅವರು ಜಾತಿಯ ಕಾರಣದಿಂದ ಭೇದ ಖಂಡಿತ ಸರಿಯಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.