ADVERTISEMENT

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಂಚಾರಮುಕ್ತ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:22 IST
Last Updated 2 ಜೂನ್ 2025, 16:22 IST
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ 2.1 ಕಿ.ಮೀ.ಉದ್ದದ ಮೇಲ್ಸೇತುವೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಉದ್ಘಾಟಿಸಿದರು
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ 2.1 ಕಿ.ಮೀ.ಉದ್ದದ ಮೇಲ್ಸೇತುವೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ಉದ್ಘಾಟಿಸಿದರು   

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ 2.1 ಕಿ.ಮೀ.ಉದ್ದದ ಮೇಲ್ಸೇತುವೆ ಸೋಮವಾರ ಸಂಚಾರಮುಕ್ತಗೊಂಡಿದೆ.

ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಡಾ.ಕೆ.ಪ್ರಭಾಕರ್ ಭಟ್ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಸೋಮವಾರ ಕಲ್ಲಡ್ಕ ಪೂರ್ಲಪಾಡಿಯಲ್ಲಿ ಮೇಲ್ಸೇತುವೆ ಉದ್ಘಾಟಿಸಿ ಸಂಚಾರಮುಕ್ತಗೊಳಿಸಿದರು.

‘ಇಲ್ಲಿನ ಜನರ ಹಲವು ವರ್ಷಗಳ ಕನಸು ನನಸುಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕೊಡುಗೆ ಅವಿಸ್ಮರಣೀಯ’ ಎಂದರು.

ADVERTISEMENT

ಪ್ರಮುಖರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಚೆನ್ನಪ್ಪ ಆರ್.ಕೋಟ್ಯಾನ್, ವಿಠಲ ನಾಯ್ಕ, ಹಿರಣ್ಮಯಿ, ಯತಿನ್ ಪೂಜಾರಿ, ಜನಾರ್ದನ ಬೊಂಡಾಲ, ಶಂಭು ಕೋರ್ಯ, ಲೋಕಾನಂದ, ಸುರೇಶ್ ಶೆಟ್ಟಿ, ಚಂದ್ರಶೇಖರ ಟೈಲರ್, ಪೂವಪ್ಪ, ಚಿತ್ತರಂಜನ್, ಸುಜಿತ್ ಕೊಟ್ಟಾರಿ, ಸತೀಶ್ ಕುಮಾರ್ ಶಿವಗಿರಿ, ತಿರುಮಲೇಶ್ ಭಟ್, ಗೋಪಾಲ ಶೆಣೈ, ನಾಗೇಶ್ ಕಲ್ಲಡ್ಕ, ಮಾದವ ಸಾಲ್ಯಾನ್, ಸನತ್ ರವಿಕುಮಾರ್, ಕೂಸಪ್ಪ, ಗುತ್ತಿಗೆ ಸಂಸ್ಥೆಯ ಮಹೇಂದ್ರ ಸಿಂಗ್, ರೋಹಿತ್ ರೆಡ್ಡಿ, ರಘುನಾಥ ರೆಡ್ಡಿ, ಅಯ್ಯಪ್ಪ ಸ್ವಾಮಿ ಭಾಗವಹಿಸಿದ್ದರು.

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ 2.1 ಕಿ.ಮೀ.ಉದ್ದದ ಮೇಲ್ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.