ADVERTISEMENT

ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ಫೆ.15ರಿಂದ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 6:20 IST
Last Updated 31 ಜನವರಿ 2023, 6:20 IST

ಮಂಗಳೂರು: ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲ, ಮಾರುತಿ ಕ್ರಿಕೆಟರ್ಸ್‌ನ 35ನೆಯ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಮತ್ತು ಮೊಗವೀರ ಕ್ರಿಕೆಟ್ ಟೂರ್ನಿಯನ್ನು ಫೆ.15ರಿಂದ 19ರವರೆಗೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಸುಧೀರ್ ವಿ.ಅಮೀನ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.15 ಮತ್ತು 16ರಂದು ಮೊಗವೀರ ಕ್ರಿಕೆಟ್ ಟೂರ್ನಿ ನಡೆಯಲಿದೆ. ಒಟ್ಟು ಎಂಟು ಫ್ರಾಂಚೈಸಿ ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನ ₹2 ಲಕ್ಷ, ದ್ವಿತೀಯ ₹1 ಲಕ್ಷ ಮತ್ತು ಸರಣಿಶ್ರೇಷ್ಠ ಮತ್ತು ವೈಯಕ್ತಿಕ ಬಹುಮಾನ ನಿಗದಿಪಡಿಸಲಾಗಿದೆ. ರಂಗಪ್ಪ ಬೆಂಗಳೂರು, ಶರತ್ ತಿಂಗಳಾಯ ಉಳ್ಳಾಲ, ಅಶ್ವಥ್ ಪುತ್ರನ್ ಉಳ್ಳಾಲ ಮತ್ತು ವಿನೋದ್ ಪುತ್ರನ್ ಬೆಂಗ್ರೆ ಅವರ ಸ್ಮರಣಾರ್ಥ ಮಾರುತಿ ಟ್ರೋಫಿ 2023 ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಫೆ.17, 18 ಮತ್ತು 19ರಂದು ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಒಟ್ಟು 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಮಧ್ಯಪ್ರದೇಶ, ಚೆನ್ನೈ, ವಿಶಾಖಪಟ್ಟಣಂನ ಒಟ್ಟು ನಾಲ್ಕು ತಂಡಗಳು ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿವೆ. ವಿಜೇತರಿಗೆ ಪ್ರಥಮ ₹4,00,004, ದ್ವಿತೀಯ ₹2,00,002 ಬಹುಮಾನ, ಸೆಮಿಫೈನಲ್ ಪ್ರವೇಶಿಸಿದ ಇತರ ಎರಡು ತಂಡಗಳಿಗೆ ತಲಾ₹ 50ಸಾವಿರ ಬಹುಮಾನ, ಸರಣಿಶ್ರೇಷ್ಠ ಮತ್ತು ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಸಂಸ್ಥೆಯ ಪ್ರಮುಖರಾದ ಭರತ್ ಕುಮಾರ್ ಉಳ್ಳಾಲ, ಮಹೇಶ್ ಸಾಲ್ಯಾನ್, ದಿನೇಶ್ ಕುಮಾರ್ ಉಳ್ಳಾಲ, ವಸಂತ್, ಚರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.