ADVERTISEMENT

ಎನ್‌ಐಟಿಕೆ ಸಂಸ್ಥಾಪನಾ ದಿನ: ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:49 IST
Last Updated 7 ಆಗಸ್ಟ್ 2022, 7:49 IST
ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ಸಂಸ್ಥಾಪನಾ ದಿನ ಆಚರಿಸಲಾಯಿತು.
ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ಸಂಸ್ಥಾಪನಾ ದಿನ ಆಚರಿಸಲಾಯಿತು.   

ಸುರತ್ಕಲ್: ಇಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್‌ಐಟಿಕೆ) 63ನೇ ಸಂಸ್ಥಾಪನಾ ದಿನ ಶನಿವಾರ ಆಚರಿಸಲಾಯಿತು. 10 ಮತ್ತು 12ನೇ ತರಗತಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಯ ಬೋಧಕೇತರ ಸಿಬ್ಬಂದಿ ಮಕ್ಕಳನ್ನು ಸನ್ಮಾನಿಸಲಾಯಿತು.

ಸಿಬ್ಬಂದಿಯ ಪ್ರತಿಭಾವಂತ ಮತ್ತು ಅಗತ್ಯವಿರುವ ಮಕ್ಕಳಿಗೆ ‘ಕೆಆರ್‌ಇಸಿ 1981 ಬ್ಯಾಚ್ ಹಳೆಯ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ’ದ ಅಡಿಯಲ್ಲಿ ತಲಾ ₹ 10 ಸಾವಿರ ನೆರವು ನೀಡಲಾಯಿತು. 25 ವರ್ಷ ಕರ್ತವ್ಯದ ಅವಧಿ ಪೂರೈಸಿದ ಎನ್ಐಟಿಕೆ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಗೌರವಿಸಲಾಯಿತು.

ಎನ್‌ಐಟಿಕೆ ಹಳೆ ವಿದ್ಯಾರ್ಥಿಯಾಗಿರುವ ಸಂಸ್ಥೆಯ ನಿರ್ದೇಶಕ ಪ್ರೊ. ಉದಯಕುಮಾರ್ ಆರ್‌. ಯರಗಟ್ಟಿ ತಮ್ಮ ಅನುಭವ ಹಂಚಿಕೊಂಡರು. ‘1960ರಲ್ಲಿ ಬಂಜರು ಭೂಮಿಯನ್ನು ಶೈಕ್ಷಣಿಕ ಉದ್ಯಾನವನ್ನಾಗಿ ಪರಿವರ್ತಿಸಿ, ವಿಶ್ವದೆಲ್ಲೆಡೆಯ ವಿದ್ಯಾರ್ಥಿಗಳಿಗೆ ಇಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತಿದೆ, ಈ ಇ-ಗಾರ್ಡನ್ ನಿರ್ಮಿಸುವಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಆತ್ಮೀಯರಾದ ಉಳ್ಳಾಲ ಶ್ರೀನಿವಾಸ್ ಮಲ್ಯ, ಟ್ರಿಪೋಸ್ ರಾಂಗ್ಲರ್, ಡಾ ಡಿ.ಸಿ ಪಾವಟೆ ಡಾ. ಎ.ಎಸ್.ಅಡ್ಕೆ ಅವರು ಶ್ರಮವಹಿಸಿ ಮಾಡಿದ ಕೆಲಸ ಈಗ ಇದು ಎನ್‌ಐಟಿಕೆ ಆಗಿ ರೂಪುಗೊಂಡಿದೆ’ ಎಂದರು.

ADVERTISEMENT

ನವೀಕರಿಸಿದ ಗ್ರಂಥಾಲಯ ಕಟ್ಟಡ ಮತ್ತು ಎನ್ಐಟಿಕೆ ಪ್ರವೇಶ ದ್ವಾರವನ್ನು ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.