ADVERTISEMENT

ಎನ್‌ಎಂಪಿಎದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 15:31 IST
Last Updated 15 ಆಗಸ್ಟ್ 2022, 15:31 IST
ನವಮಂಗಳೂರು ಬಂದರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷ ಎ.ವಿ.ರಮಣ ಅವರು ಪರೇಡ್ ತುಕಡಿಗಳನ್ನು ವೀಕ್ಷಿಸಿದರು
ನವಮಂಗಳೂರು ಬಂದರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷ ಎ.ವಿ.ರಮಣ ಅವರು ಪರೇಡ್ ತುಕಡಿಗಳನ್ನು ವೀಕ್ಷಿಸಿದರು   

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಅಧ್ಯಕ್ಷಡಾ. ಎ.ವಿ. ರಮಣ ಮತ್ತು ಡಿ. ಅಧ್ಯಕ್ಷ ಕೆ.ಜಿ.ನಾಥ್ ಅವರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಯು.ಎಸ್. ಮಲ್ಯ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿತು. ಸಿಐಎಸ್‌ಎಫ್, ಅಗ್ನಿಶಾಮಕ ಸೇವಾ ಸಿಬ್ಬಂದಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬಂದರಿನ ಖಾಸಗಿ ಭದ್ರತಾ ಸಿಬ್ಬಂದಿ ಒಳಗೊಂಡ ಪರೇಡ್ ತುಕಡಿಗಳನ್ನು ಅಧ್ಯಕ್ಷರು ವೀಕ್ಷಿಸಿದರು. ‘75 ವರ್ಷಗಳಲ್ಲಿ ದೇಶವು ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಪ್ರಮುಖ ಬಂದರುಗಳು 2021-22ರಲ್ಲಿದ್ದ 800 ಎಂಎಂಟಿ ಸಾಮ‌ರ್ಥ್ಯದಿಂದ 1597 ಎಂಎಂಟಿ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಬೆಳೆದಿವೆ ಎಂದರು. ಮುಂಬರುವ ವರ್ಷಗಳಲ್ಲಿ ಎನ್‌ಎಂಪಿಎ ದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಲಿದೆ ಎಂದು ಆಶಿಸಿದರು.

ಆದರ್ಶಪ್ರಾಯ ಸಾಧನೆ ಮಾಡಿದ ಶಾಲಾ ಮಕ್ಕಳು ಮತ್ತು ಬಂದರು ನೌಕರರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.