ADVERTISEMENT

ಪ್ಯಾಕಥಾನ್: ಅಗ್ರಿಲೀಫ್‌ಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:06 IST
Last Updated 17 ಮೇ 2025, 15:06 IST
ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್ ಪ್ರಶಸ್ತಿ ಸ್ವೀಕರಿಸಿದರು
ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್ ಪ್ರಶಸ್ತಿ ಸ್ವೀಕರಿಸಿದರು   

ಮಂಗಳೂರು: ಝೊಮ್ಯಾಟೊ ಸಂಸ್ಥೆ ಈಚೆಗೆ ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪ್ಲಾಸ್ಟಿಕ್ ಮುಕ್ತ ಫ್ಯೂಚರ್ ಪ್ಯಾಕಥಾನ್ ಸ್ಪರ್ಧೆಯ ಪ್ಯಾಕಿಂಗ್ ವಿಭಾಗದಲ್ಲಿ ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆಯ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರಥಮ ಸ್ಥಾನದೊಂದಿಗೆ ₹10 ಲಕ್ಷ ನಗದು ಪುರಸ್ಕಾರ ಪಡೆದುಕೊಂಡಿದೆ.

ಆಹಾರ ವಿತರಣಾ ಉದ್ಯಮದಲ್ಲಿ ಸುಸ್ಥಿರ ಪಾರ್ಸೆಲ್ ವ್ಯವಸ್ಥೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಸ್ಟಾರ್ಟ್‌ಅಪ್ ಇಂಡಿಯಾ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅಗ್ರಿಲೀಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ರಾವ್, ಬೆಳೆಯುತ್ತಿರುವ ನಮ್ಮ ಸ್ಟಾರ್ಟ್‌ಅಪ್‌ ಸಂಸ್ಥೆಯ ಆತ್ಮವಿಶ್ವಾಸವನ್ನು ಇದು ಮತ್ತಷ್ಟು ಬಲಪಡಿಸಿದೆ. ಉತ್ಪನ್ನದ ಅಭಿವೃದ್ಧಿಗೆ ಬೇಕಾಗಿರುವ ಉದ್ಯಮಗಳ ಅಗತ್ಯದ ಬಗ್ಗೆ ಈ ಸ್ಪರ್ಧಾ ವೇದಿಕೆ ಮಾರ್ಗದರ್ಶನ ದೊರೆತಿದೆ ಎಂದಿದ್ದಾರೆ.

ADVERTISEMENT

ಪ್ಯಾಕಥಾನ್ ನಲ್ಲಿ 21 ರಾಜ್ಯಗಳ 128 ಸಂಸ್ಥೆಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ 47 ಸ್ಟಾರ್ಟ್‌ಅಪ್‌ಗಳು ಮಹಿಳಾ ಉದ್ಯಮಿಗಳ ನೇತೃತ್ವದಲ್ಲಿದ್ದವು. ಟಾಪ್ 10 ಸ್ಟಾರ್ಟ್ ಅಪ್‌ಗಳಲ್ಲಿ ಅಗ್ರಿಲೀಫ್ ಸಂಸ್ಥೆಯ ಪ್ಲಾಸ್ಟಿಕ್ ಮುಕ್ತ ಉತ್ಪನ್ನವನ್ನು ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.