ADVERTISEMENT

ಸಂಘ ಸಂಸ್ಥೆಗಳ ನೆರವಿನಿಂದ ಉದ್ಯಾನ ಅಭಿವೃದ್ಧಿ: ಮೇಯರ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 5:36 IST
Last Updated 19 ಸೆಪ್ಟೆಂಬರ್ 2022, 5:36 IST
ಸ್ವರ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್‌ ಜಯಾನಂದ ಅಂಚನ್‌ ಮಾತನಾಡಿದರು. ಸಂಧ್ಯಾ ಮೋಹನ ಆಚಾರ್ಯ, ವಸಂತಿ ಕಾಮತ್, ಉಪ ಮೇಯರ್‌ ಪೂರ್ಣಿಮಾ, ಶಾಂತಾರಾಮ ಶೆಟ್ಟಿ, ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಇತರರು ಇದ್ದಾರೆ
ಸ್ವರ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್‌ ಜಯಾನಂದ ಅಂಚನ್‌ ಮಾತನಾಡಿದರು. ಸಂಧ್ಯಾ ಮೋಹನ ಆಚಾರ್ಯ, ವಸಂತಿ ಕಾಮತ್, ಉಪ ಮೇಯರ್‌ ಪೂರ್ಣಿಮಾ, ಶಾಂತಾರಾಮ ಶೆಟ್ಟಿ, ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಇತರರು ಇದ್ದಾರೆ   

ಮಂಗಳೂರು: ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಇನ್ನರ್ ವೀಲ್ ಕ್ಲಬ್‌ನ ಮಂಗಳೂರು ಉತ್ತರ ಘಟಕದ ಸಹಯೋಗದಲ್ಲಿ ಹ್ಯಾಟ್ ಹಿಲ್ ಆವರಣದಲ್ಲಿರುವ ಪಾಲಿಕೆಯ ಇಂದಿರಾ ಪ್ರಿಯದರ್ಶಿನಿ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಸ್ವಚ್ಛ ಪರಿಸರ ಹೊಂದುವುದಕ್ಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸಂಧ್ಯಾ ಮೋಹನ ಆಚಾರ್ಯ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಇನ್ನರ್ ವೀಲ್ ಕ್ಲಬ್‌ನ ಮಂಗಳೂರು ಉತ್ತರ ಘಟಕದ ಅಧ್ಯಕ್ಷೆ ವಸಂತಿ ಕಾಮತ್, ಎನ್ಐಟಿಕೆಯ ದೈಹಿಕ ನಿರ್ದೇಶಕ ಶಿವರಾಂ ಮೊದಲಾದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.