ADVERTISEMENT

ಪಾವಂಜೆ: ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:31 IST
Last Updated 27 ಜನವರಿ 2023, 5:31 IST
ಪಾವಂಜೆಯ ನಂದಿನಿ ನದಿಯ ತಟದಲ್ಲಿ ಪ್ರಕೃತಿಯ ಮಡಿಲಲ್ಲಿ ಕಾಣುತ್ತಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ
ಪಾವಂಜೆಯ ನಂದಿನಿ ನದಿಯ ತಟದಲ್ಲಿ ಪ್ರಕೃತಿಯ ಮಡಿಲಲ್ಲಿ ಕಾಣುತ್ತಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ   

ಮೂಲ್ಕಿ: ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜ.19ರಿಂದ ಆರಂಭಗೊಂಡ ಪುನರ್ ಪ್ರತಿಷ್ಠೆ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮವು ಜ.28ವರೆಗೆ ಸಂಪನ್ನಗೊಳ್ಳಲಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಜ.28ರಂದು ಬೆಳಿಗ್ಗೆ 8.10ಕ್ಕೆ ಕುಂಭ ಲಗ್ನ ಸುಮೂರ್ತದಲ್ಲಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಅಂದು 25 ಸಾವಿರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ದೇವರ ದರ್ಶನ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸೇವೆಯನ್ನು ನೀಡಿದವರಿಗೆ ಗೌರವ ಸಹಿತ ದೇವಳಕ್ಕೆ ಬರುವ ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾನಿಲ್ ತಿಳಿಸಿದ್ದಾರೆ.

ವಿಶೇಷ ಆಕರ್ಷಣೆ: ಪಾವಂಜೆ ದೇವಳದಲ್ಲಿ ಅಭಿವೃದ್ಧಿಗೆ ಪೂರಕವಾಗಿ ನಿರ್ಮಿಸಿದ ತಿರುಗುವ ಮಂಟಪ, ಆನೆಯ ಮುಖದ ಚಿತ್ತಾಕರ್ಷಕ ಮುಖದ್ವಾರ ಅದರಲ್ಲಿಯೂ ಪ್ರಕೃತಿ ರಮಣೀಯ ದೃಶ್ಯವಾಗಿ ನಂದಿನಿ ನದಿಯ ಸುತ್ತ ರಸ್ತೆಯನ್ನು ನಿರ್ಮಿಸಿರುವುದರಿಂದ ರಾತ್ರಿ ಸಮಯದಲ್ಲಿ ವಿಶೇಷ ವಿದ್ಯುತ್ ಅಲಂಕಾರಗಳಿಂದ ಕಂಗೊಳಿಸಿಸುತ್ತಿದೆ. ದೇವಳಕ್ಕೆ ಬರುವ ಅಶಕ್ತ ಹಾಗೂ ವೃದ್ಧರಿಗಾಗಿ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.