ADVERTISEMENT

ಶಾಂತಿ–ಪ್ರೀತಿ ಯೇಸು ಜನನದ ಕೊಡುಗೆ: ಫಾದರ್ ವಿಕ್ಟರ್ ಡಿಸೋಜ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:53 IST
Last Updated 25 ಡಿಸೆಂಬರ್ 2025, 6:53 IST
<div class="paragraphs"><p><strong>ಫಾದರ್ ವಿಕ್ಟರ್ ಡಿಸೋಜ</strong></p></div>

ಫಾದರ್ ವಿಕ್ಟರ್ ಡಿಸೋಜ

   

ವಿಶ್ವದಾದ್ಯಂತ ಆಚರಿಸುವ ಕ್ರಿಸ್‌ಮಸ್ ದೇವರಿಗೆ ಅತ್ಯಂತ ಪ್ರೀತಿಯ ಹಬ್ಬ. ಹೀಗಾಗಿ ಇದು ಮಾನವ ಕುಲಕ್ಕೆ ಸಂತೋಷ ತರುವ ಹಬ್ಬ ಕೂಡ ಆಗಿದೆ. ಮನುಜರನ್ನು ಪಾಪದಿಂದ ಮುಕ್ತಗೊಳಿಸಿದ್ದರ ಸಂಕೇತ ಕೂಡ ಆಗಿದೆ ಕ್ರಿಸ್‌ಮಸ್‌.

2025 ವರ್ಷಗಳ ಹಿಂದೆ ದೇವರು ಜಗತ್ತಿಗೆ ನೀಡಿದ ವಾಗ್ದಾನದ ಪ್ರಕಾರ ಯೇಸು ಕ್ರಿಸ್ತನ ಜನನವಾಗು
ತ್ತದೆ. ಆ ಜನನದ ಮೂಲಕ ಮನುಕುಲವು ದೇವರಲ್ಲಿ ಒಂದಾಗುವ ಸನ್ನಿವೇಶ ಸೃಷ್ಟಿಯಾಯಿತು. ಗೋದಲಿಯೊಂದರಲ್ಲಿ ಸುರೂಪಿ ಮಗುವಾಗಿ ಜನಿಸಿದ ದೇವರು ಮನುಕುಲವನ್ನಿಡೀ ಪ್ರೀತಿಸಿ ಜಗತ್ತನ್ನು ಬೆಳಗಿದರು. ಯೇಸು ಕ್ರಿಸ್ತ ಕಲಿಸಿದ ಪ್ರೀತಿಯನ್ನು ಪರಸ್ಪರ ಹಂಚುವುದೆ ಕ್ರಿಸ್‌ಮಸ್ ಹಬ್ಬದ ಆಶಯ ಮತ್ತು ಸಂದೇಶ. ಅದು ಇಲ್ಲಿಯ ವರೆಗೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. 

ADVERTISEMENT

ಯೇಸುವಿನ ಜನನದ ಸಂದರ್ಭವೇ ಕ್ರಿಸ್‌ಮಸ್ ವಿಶೇಷ. ದೇವಪುತ್ರನ ಜನನದ ಸಂದರ್ಭದಲ್ಲಿ ಅಶರೀರವಾಣಿಯೊಂದು ಕೇಳಿದ್ದರ ಬಗ್ಗೆ ಬೈಬಲ್‌ನಲ್ಲಿ  ಉಲ್ಲೇಖವಿದೆ. ಸ್ವರ್ಗದಲ್ಲಿ ದೇವರಿಗೆ ಮಹಿಮೆಯಾಗಲಿ, ಭೂಲೋಕದಲ್ಲಿ ಸುಮನಸ್ಸು ಉಳ್ಳವರಿಗೆ ಶಾಂತಿ ಸಿಗಲಿ ಎಂಬುದು ಆ ದೇವವಾಣಿ. ಹೀಗಾಗಿ ಶಾಂತಿ ಮತ್ತು ಪ್ರೀತಿಯೇ ಜಗತ್ತಿಗೆ ಯೇಸು ಜನನದಿಂದ ಸಿಕ್ಕಿದ ಕೊಡುಗೆ. ಹಾಗೆ ಬಂದ ಕೊಡುಗೆಯ ಶಾಂತಿ ಮತ್ತು ಪ್ರೀತಿ ಕ್ರಿಸ್‌ಮಸ್ ಆಚರಿಸುವ ಸಂದರ್ಭದಲ್ಲಿ ಪ್ರತಿಯೊಂದು ಕಡೆಯೂ ನೆಲೆಲಾಗಲಿ, ಎಲ್ಲರಿಗೂ ಶುಭವಾಗಲಿ. 

-ಫಾದರ್ ವಿಕ್ಟರ್ ಡಿಸೋಜ,ಮೊಡಂಕಾಪು ಬಾಲ ಯೇಸುವಿನ ಚರ್ಚ್‌ ಧರ್ಮಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.