ADVERTISEMENT

ಬೆಳ್ತಂಗಡಿ | ವಿದ್ಯುತ್ ಆಘಾತ: ಸಹಾಯಕ ಪವರ್ ಮ್ಯಾನ್ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2025, 13:07 IST
Last Updated 30 ಮೇ 2025, 13:07 IST
ವಿಜೇಶ್ ಕುಮಾರ್
ವಿಜೇಶ್ ಕುಮಾರ್   

ಬೆಳ್ತಂಗಡಿ: ವಿದ್ಯುತ್ ಪರಿವರ್ತಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತದಿಂದ ಸಹಾಯಕ ಪವರ್ ಮ್ಯಾನ್ ಶುಕ್ರವಾರ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಕುವೆಟ್ಟು ಅಮರಜಾಲು ಬಳಿ ಪರಿವರ್ತಕದ ಫ್ಯೂಸ್ ಹಾಕಲು ಹೋಗಿದ್ದ ಓಡಿಲ್ನಾಳ ನಿವಾಸಿ ವಿಜೇಶ್ ಕುಮಾರ್ ಕೆ. (35) ಮೃತಪಟ್ಟವರು.

ಅವಿವಾಹಿತರಾಗಿದ್ದ ಅವರು ಎಂಟು ವರ್ಷಗಳಿಂದ ಇಲಾಖೆಯಲ್ಲಿ ಸಹಾಯಕ ಪವರ್ ಮ್ಯಾನ್ ಆಗಿದ್ದರು.

ADVERTISEMENT

ಕೆಲಸ ನಿರ್ವಹಿಸುವುದಕ್ಕಾಗಿ ಜಿಒಎಸ್‌ನಲ್ಲಿ ವಿದ್ಯುತ್ ಕಡಿತಗೊಳಿಸಿ ಅವರು ಪರಿವರ್ತಕದ ಮೇಲೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ವಿದ್ಯುತ್‌ ಆಘಾತಗೊಂಡು ಸ್ಥಳದಲ್ಲೇ ಮೃತಪಟ್ಟರು. ಜಿಒಎಸ್‌ನಲ್ಲಿ ಸರಿಯಾಗಿ ವಿದ್ಯುತ್ ಕಡಿತಗೊಳ್ಳದೆ ಇರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.