ADVERTISEMENT

ಪುತ್ತೂರು: ಪುತ್ತಿಲ ಪರಿವಾರದಿಂದ ಉಚಿತ ವೈದ್ಯಕೀಯ ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 11:56 IST
Last Updated 10 ಮಾರ್ಚ್ 2025, 11:56 IST
ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನಡೆದ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ, ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಅರುಣ್‌ಕುಮಾರ್‌ ಪುತ್ತಿಲ ಉದ್ಘಾಟಿಸಿದರು
ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನಡೆದ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ, ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಅರುಣ್‌ಕುಮಾರ್‌ ಪುತ್ತಿಲ ಉದ್ಘಾಟಿಸಿದರು   

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಇರ್ದೆ, ಬೆಟ್ಟಂಪಾಡಿ, ಪಾಣಾಜೆ ಮತ್ತು ನಿಡ್ಪಳ್ಳಿ ಘಟಕಗಳ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರ, ಅಟಲ್‌ಜಿ ಜನ್ಮಶತಾಬ್ದಿ ಆಚರಣೆಯ ಅಂಗವಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಉದ್ಘಾಟಿಸಿದರು. 

ಬಿಜೆಪಿ ಬೆಟ್ಟಂಪಾಡಿ ಶಕ್ತಿ ಕೇಂದ್ರದ ಸಂಚಾಲಕ ಸಂದೀಪ್ ರೈ ಬೆಟ್ಟಂಪಾಡಿ ಅಧ್ಯಕ್ಷತೆ ವಹಿಸಿದ್ದರು. 

ADVERTISEMENT

ಪ್ರಮುಖರಾದ ಮಹೇಂದ್ರ ವರ್ಮ ವಳಾಲು, ರವಿಕುಮಾರ್ ರೈ ಕೆದಂಬಾಡಿ ಮಠ, ಉಮೇಶ್ ಕೋಡಿಬೈಲು, ಡಾ.ಸತೀಶ್‌ಕುಮಾರ್‌ ಬಿ., ಸಂತೋಷ್‌ಕುಮಾರ್ ಬಿ., ಪ್ರೇಮ್‌ರಾಜ್‌ ಆರ್ಲಪದವು, ಪುರಂದರ ಡಿ., ಸುಜಿತ್ ಕಜೆ ಭಾಗವಹಿಸಿದ್ದರು.

ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಬಿ.ವೆಂಕಟ್ರಾವ್ ಬೆಟ್ಟಂಪಾಡಿ, ಸಂಜೀವ ಶೆಟ್ಟಿ ಕೊಮ್ಮಂಡ, ನಾರಾಯಣ ಭಟ್ ಕಾಕೆಕೊಚ್ಚಿ, ಸೋಮಪ್ಪ ನಾಯ್ಕ ಬಾಜಗುಳಿ, ಸುಬ್ಬಣ್ಣ ಗೌಡ ಪಾರ, ಶ್ರೀನಿವಾಸ ಭಟ್ ವಾಲ್ತಾಜೆ, ಪರಮೇಶ್ವರ ನಾಯ್ಕ, ಗುರುವ ಗೋಳಿಪದವು ಅವರನ್ನು ಗೌರವಿಸಲಾಯಿತು. 

ಆಂಬುಲೆನ್ಸ್‌ ಚಾಲಕರಾದ ಮೋಹನ್ ಭರಣ್ಯ, ಪ್ರೇಮ್‌ರಾಜ್‌ ಆರ್ಲಪದವು, ರಕ್ಷನ್ ಕುಲಾಲ್ ಬೇಂಗತ್ತಡ್ಕ, ಸುಖಿನ್‌ರಾಜ್‌, ಸುಜಿತ್ ಕಜೆ, ಚರಣ್ ಕಕ್ಕೂರು, ಜಗದೀಶ್ ಆರ್ಲಪದವು ಅವರನ್ನು ಸನ್ಮಾನಿಸಲಾಯಿತು.

ಕುಮಾರ ನರಸಿಂಹ ಭಟ್ ಸ್ವಾಗತಿಸಿದರು. ಯತೀಶ್ ಕೋರ್ಮಂಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.