ಪುತ್ತೂರು: ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕಿನ ಮೀಸಲು ಅರಣ್ಯ ಪ್ರದೇಶದ ಬಳಿಯ ಕೃಷಿಭೂಮಿಯ ಜಂಟಿ ಸರ್ವೆ ನಡೆಸಿ ರೈತರ ಸ್ವಾಧೀನದಲ್ಲಿರುವ ಭೂಮಿಗೆ ಹಕ್ಕುಪತ್ರ ನೀಡಿ ಫ್ಲೋಟಿಂಗ್ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರ ಮಲೆನಾಡು ಹಿತರಕ್ಷಣಾ ವೇದಿಕೆಯ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದರೂ ಹಕ್ಕುಪತ್ರ ಇಲ್ಲದ ಹಾಗೂ ಫ್ಲೋಟಿಂಗ್ ಆಗದ ಕಾರಣ ಕೃಷಿ ಅಭಿವೃದ್ಧಿ ಸಾಲ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ರೈತರ ವಿಶೇಷ ಸಭೆ ನಡೆಸಿ ಕಾನೂನು ಮಾಹಿತಿ ನೀಡಬೇಕು. ಮೇ.10ರ ಒಳಗೆ ಫ್ಲೋಟಿಂಗ್ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಮುಖಂಡರಾದ ಸಯ್ಯದ್ ಮೀರಾ ಸಾಹೇಬ್, ಕುಶಾಲಪ್ಪ ಗೌಡ, ವಕೀಲ ಲೋಕೇಶ್ ಎಂ.ಜೆ, ಪ್ರಮುಖರಾದ ಅಶೋಕ್ ಕುಮಾರ್, ಭರತ್ ಪಾಲೆಮಜಲು, ತೀರ್ಥರಾಮ ಎನ್.ಕೆ, ದೇವಿ ಪ್ರಸಾದ್ ಬಿ, ರಾಜೇಶ್ ಕೆ.ಎಸ್, ವಿನಯ ಕೆ, ದುರ್ಗಾ ಪ್ರಸಾದ್, ಕೆ.ಗಣೇಶ್, ವಿನಯಕುಮಾರಿ ಬಳಕ್ಕ, ಪವಿತ್ರಾ ಪಿಲತ್ತಡಿ, ಯೋಗೇಂದ್ರ, ಪ್ರಭಾಕರ ಬಿ, ರಮಾನಂದ ಎ, ಜನಾರ್ದನ ಗೌಡ, ಯುವರಾಜ, ರಾಮಣ್ಣ ಗೌಡ, ಗುರುಪ್ರಸಾದ್ ಪಂಜ, ರಂಜಿತ್ ಜಬಳೆ, ದಯಾನಂದ ಬಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.