ADVERTISEMENT

ದೇಶಕ್ಕೆ ಜನನಾಯಕ ಅಗತ್ಯ: ಮಾಜಿ ಸಚಿವ ಕೆ. ಅಭಯಚಂದ್ರ ಜೈನ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 5:57 IST
Last Updated 20 ಜೂನ್ 2021, 5:57 IST
ರಾಹುಲ್ ಗಾಂಧಿ ಜನ್ಮ ದಿನಾಚರಣೆ ನಿಮಿತ್ತ ಮೂಲ್ಕಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ರಾಹುಲ್ ಗಾಂಧಿ ಜನ್ಮ ದಿನಾಚರಣೆ ನಿಮಿತ್ತ ಮೂಲ್ಕಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.   

ಮೂಲ್ಕಿ: ‘ದೇಶ ಅರಾಜಕತೆಯಲ್ಲಿ ಸಾಗಿದೆ. ರಾಷ್ಟ್ರವನ್ನು ಆಳುವ ಯುವ ನಾಯಕರಿಗೆ ಅವಕಾಶ ಸಿಗಬೇಕು. ಜವಾಹರಲಾಲ್ ನೆಹರೂ ಅವರ ಆದರ್ಶವನ್ನು ಪಾಲಿಸಲು ರಾಹುಲ್ ಗಾಂಧಿ ಅವರಂತಹ ಭಾರತೀಯ ಶಕ್ತಿಯನ್ನು ತೋರಿಸಬಲ್ಲ ಜನನಾಯಕರ ಅಗತ್ಯವಿದೆ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ರಾಹುಲ್ ಗಾಂಧಿ ಜನ್ಮದಿನದ ನಿಮಿತ್ತ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಫಲಾನುಭವಿಗಳಿಗೆ ಅಕ್ಕಿ, ಪಡಿತರ ಹಾಗೂ ಸಹಾಯಧನ ವಿತರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಎಚ್ ವಸಂತ್ ಬೆರ್ನಾಡ್, ಪ್ರವೀಣ್ ಕುಮಾರ್ ಬೊಳ್ಳೂರು, ಪದ್ಮಾವತಿ ಶೆಟ್ಟಿ, ಅಶೋಕ್ ಪೂಜಾರ್, ಹಳೆಯಂಗಡಿ ಪ್ರಜಾಪ್ರತಿನಿಧಿ ಸಮಿತಿಯ ಅಧ್ಯಕ್ಷ ಧನರಾಜ್ ಕೋಟ್ಯಾನ್, ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಸತೀಶ್ ಕೋಟ್ಯಾನ್ ಕೊಳುವೈಲು, ನವೀನ್ ಸಾಲ್ಯಾನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.