ADVERTISEMENT

ಬೆಳ್ತಂಗಡಿ: ಅಲ್ಲಲ್ಲಿ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 4:55 IST
Last Updated 3 ನವೆಂಬರ್ 2022, 4:55 IST

ಬೆಳ್ತಂಗಡಿ: ತಾಲ್ಲೂಕಿನ ಬೆಳ್ತಂಗಡಿ, ಉಜಿರೆ, ನಾರಾವಿ, ಗೇರುಕಟ್ಟೆ ನಡ, ಕನ್ಯಾಡಿ, ಕಲ್ಮಂಜ, ಮುಂಡಾಜೆ, ಕಡಿರು ದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ದಿಡುಪೆ ಮೊದಲಾದ ಪರಿಸರಗಳಲ್ಲಿ ಬುಧವಾರ ಮಧ್ಯಾಹ್ನ ಮಳೆ ಸುರಿಯಿತು.

ಅರ್ಧ ತಾಸು ಸುರಿದ ಮಳೆ ಅಂಗಳಗಳಲ್ಲಿ ಒಣಗಲು ಹಾಕಿದ್ದ ಅಡಕೆ ಒದ್ದೆಯಾಗಲು ಕಾರಣವಾಗಿದೆ. ಏಣೇಲು ಭತ್ತದ ಗದ್ದೆ ಕಟಾವು ಹಾಗೂ ಇದರ ಮುಂದಿನ ವ್ಯವಸ್ಥೆಗಳಿಗೂ ಅಡ್ಡಿ ನೀಡಿತು. ಮಧ್ಯಾಹ್ನದವರೆಗೆ ಬಿಸಿಲು ಹಾಗೂ ವಿಪರೀತ ಸೆಕೆ ಇತ್ತು. ಮಳೆಯಾದ ಬಳಿಕ ಮೋಡಕವಿದ ವಾತಾವರಣ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT