ಉಪ್ಪಿನಂಗಡಿ: ಕಡಬ ತಾಲ್ಲೂಕು ವ್ಯಾಪ್ತಿಯ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಕುಮಾರಧಾರಾ ನದಿಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯ ಗೇಟು ತೆರವು ಮಾಡದೆನೆರೆ ಭೀತಿ ಎದುರಾಗಿದೆ. ಪರಿಸರದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗುವಆತಂಕಎದುರಾಗಿದ್ದು, ಗೇಟು ತೆಗೆಯದೆಇದ್ದರೆ ಅಣೆಕಟ್ಟೆಗೂಸಮಸ್ಯೆಉಂಟಾಗುವಸಾಧ್ಯತೆಇದೆ.
9 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಅಣೆಕಟ್ಟೆಯ ಮೇಲಿನಿಂದ ನೀರು ಧುಮ್ಮಿಕ್ಕುರತ್ತಿದೆ. ಅಣೆಕಟ್ಟೆಗೆ ಜೋಡಿಸಲಾಗಿರುವ ಗೇಟುಗಳನ್ನು ಮಳೆಗಾಲ ಆರಂಭವಾಗುತ್ತಿದ್ದಂತೆ ತೆಗೆಯುವ ವಾಡಿಕೆ ಇದ್ದರೂ ಈ ಬಾರಿ ಮುಂಗಾರು ಬೇಗ ಆರಂಭವಾಗಿದ್ದರಿಂದ ಸಮಸ್ಯೆ ಆಗಿದೆ.
ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಗುತ್ತಿಗೆದಾರರು ಹಾಗೂ ಈ ಭಾಗದ ಕೆಲವು ರೈತರು ಹಲಗೆ ಜೋಡಣೆಗೆಮಾಡಿದ್ದರು. ಇದೀಗ ಜೋಡಿಸಿದ ಹಲಗೆಗಳನ್ನು ತೆಗೆಯಲು ಯಾರೂ ಇಲ್ಲದಂತಾಗಿದೆ. 2023ರಲ್ಲಿ ಹಲಗೆ ಜೋಡಿಸಿದ್ದರೂ ನೀರು ಸೋರಿಕೆಯಾಗಿ ರೈತರಿಗೆ ನೀರು ಸಿಕ್ಕಿರಲಿಲ್ಲ. ಈ ಬಾರಿ ರೈತರು ಗುತ್ತಿಗೆದಾರರೊಂದಿಗೆ24 ದಿನ ಶ್ರಮದಾನದ ಮೂಲಕ ಶ್ರಮಿಸಿಹಲಗೆ ಜೋಡಿಸಿದ್ದರು.
ನೂರಾರು ಮನೆಗಳಿಗೆ ನೀರು ನುಗ್ಗುವ ಭೀತಿ: ಹಲಗೆ ತೆರವು ಆಗದಿದ್ದರೆ ಮಳೆಗಾಲದಲ್ಲಿ ನೆರೆ ನೀರು ಹೆಚ್ಚಾಗಿ ಸಮೀಪದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನದಿ ಪಾತ್ರದ ನೂರಾರು ಮನೆಗಳಿಗೆ ನೀರು ನುಗ್ಗುವುದು ಖಚಿತ ಎಂದು ಹೇಳಲಾಗುತ್ತಿದೆ. ನದಿಗೆ ಸೇರುವ ತೋಡುಗಳ ಮೂಲಕ ಹಿನ್ನೀರು ನುಗ್ಗಲಿದೆ. ಅಣೆಕಟ್ಟೆಯ ಮೇಲೆ ನೀರು ಹಾದು ಹೋಗುವುದರಿಂದ ಸುಮಾರು ಹತ್ತು ಅಡಿ ನೀರು ಹೆಚ್ಚಿದಂತಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಸಾಮಾನ್ಯ ನೆರೆ ನೀರಿಗೂ ನೆರೆ ಹೆಚ್ಚಾಗಿ ಪಕ್ಕದ ಬಾಲಸುಬ್ರಹ್ಮಣ್ಯ ದೇವಸ್ಥಾನಕ್ಕೂ ನೀರು ನುಗ್ಗುವ ಸಾಧ್ಯತೆ ಇದೆ.
ಪಶ್ಚಿಮವಾಹಿನಿ ಯೋಜನೆಯಲ್ಲಿ ಸುಮಾರು ₹7ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅಣೆಕಟ್ಟೆಯ ತಳಭಾಗದಲ್ಲಿ ಸಮರ್ಪಕವಾಗಿ ಬೆಡ್ ಹಾಕದ ಕಾರಣ ಹಲಗೆಗಳು ಮರು ಬಳಕೆಗೆ ಯೋಗ್ಯವಾಗಿ ಉಳಿಯುವುದು ಅನುಮಾನ, ನೀರಿನ ಸೆಳೆತದಿಂದ ಅಣೆಕಟ್ಟೆಗೆದಾನಿಯೂಆಗಬಹುದುಎನ್ನುತ್ತಾರೆ ಇಲ್ಲಿನ ರೈತರು.
15 ದಿನಗಳ ಹಿಂದೆಯೇ ಹಲಗೆ ತೆಗೆಯಲು ಸಿದ್ಧತೆ: ಮೇ ಆರಂಭದಲ್ಲೇಗೇಟ್ ತೆಗೆಯಲು ಮುಂದಾಗಿದ್ದೆವು. 15 ದಿನಗಳ ಹಿಂದೆ ಗೇಟು ತೆಗೆಯಲು ಸಿದ್ಧತೆ ನಡೆಸಿ ಅಲ್ಲಿಗೆ ಹೋಗಿದ್ದೆವು. ಆದರೆ, ಸ್ಥಳೀಯ ರೈತರು ತೋಟಕ್ಕೆ ಪಂಪ್ ಇಟ್ಟಿದ್ದೇವೆ. ಗೇಟ್ ಈಗಲೇ ತೆಗೆಯಬೇಡಿ, ಕೃಷಿಗೆ ನೀರು ಇಲ್ಲದಂತಾಗಬಹುದು, ಸ್ವಲ್ಪ ದಿನಗಳ ಬಳಿಕ ತೆಗೆಯಿರಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಮಳೆ ಬೇಗ ಆರಂಭವಾಗಿ ಸಮಸ್ಯೆ ಉಂಟಾಗಿದೆ. ಅಲ್ಲಿ ಈ ಹಿಂದೆ ಕ್ರೇನ್ ಹೋಗಲು ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಲಾಗಿತ್ತು. ಅದೂ ಕೊಚ್ಚಿ ಹೋಗಿದೆ, ಇದೀಗ ಸ್ಥಳೀಯರೊಬ್ಬರ ಜಾಗದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಕ್ರೇನ್ ಹೋಗಲು ವ್ಯವಸ್ಥೆ ಮಾಡಿ ಕನಿಷ್ಠ 2 ಗೇಟ್ ತೆಗೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ರವಿಚಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.