ADVERTISEMENT

ದಕ್ಷಿಣ ಕನ್ನಡ: 2.6 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 20 ಮೇ 2024, 7:39 IST
Last Updated 20 ಮೇ 2024, 7:39 IST
<div class="paragraphs"><p>ಮಳೆ</p></div>

ಮಳೆ

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಕೆಲವೆಡೆ ಧಾರಾಕಾರ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 2.6 ಸೆಂ.ಮೀ. ಮಳೆ ದಾಖಲಾಗಿದೆ. ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದೆ.

ಸೋಮವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಮೂಡುಬಿದಿರೆಯಲ್ಲಿ 7.26 ಸೆಂ.ಮೀ, ಬೆಳಂದೂರಿನಲ್ಲಿ 6.95, ಉಬರಡ್ಕರ ಮಿತ್ತೂರಿನಲ್ಲಿ 5.8, ನೂಜಿಬಾಳ್ತಿಲದಲ್ಲಿ 5.3, ಕೋಟೆಕಾರಿನಲ್ಲಿ 5.2, ಅರಂತೋಡಿನಲ್ಲಿ 4.9, ಪಡುಪಣಂಬೂರಿನಲ್ಲಿ 4.6, ಪಾಂಡೇಶ್ವರ ಮತ್ತು ಅನಂತಾಡಿಯಲ್ಲಿ ತಲಾ 4.55 ಹಾಗೂ ನೆಲ್ಯಾಡಿಯಲ್ಲಿ 4.44 ಸೆಂ.ಮೀ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಗಾಳಿ, ಗುಡುಗು ಸಿಡಿಲುಗಳಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.