ಉಜಿರೆ (ದಕ್ಷಿಣ ಕನ್ನಡ): ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಲ್ಲಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 5 ಕಿ.ಮೀ. ಮಳೆಯಲ್ಲಿ ಓಟ್ (ರೈನಥಾನ್) ಪುರುಷರ ವಿಭಾಗದಲ್ಲಿ ಬಾಗಲಕೋಟೆಯ ಶಿವಾನಂದ ಚಿಗಾರಿ, ಮಹಿಳೆಯರ ವಿಭಾಗದಲ್ಲಿ ಧಾರವಾಡದ ಶಹಿನ್ ಎಸ್.ಡಿ. ಪ್ರಥಮ ಸ್ಥಾನ ಪಡೆದು ತಲಾ ₹10 ಸಾವಿರ ನಗದು ಮತ್ತು ಚಿನ್ನದ ಪದಕ ಗೆದ್ದುಕೊಂಡರು.
ಬೆಳ್ತಂಗಡಿ ರೋಟರಿ ಕ್ಲಬ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು, ವ್ಯಾಯಾಮ್ ಉಜಿರೆ ಹಾಗೂ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಸ್ಪರ್ಧೆ ನಡೆಯಿತು.
ಸ್ಪರ್ಧೆಯ ಫಲಿತಾಂಶ: ನಾಗರಾಜ್ ಹುಬ್ಬಳ್ಳಿ (ದ್ವಿತೀಯ– ₹7 ಸಾವಿರ ನಗದು, ಬೆಳ್ಳಿ ಪದಕ), ರಂಗಣ್ಣ, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು, ಎಡಪದವು(ತೃತೀಯ– ₹ 5 ಸಾವಿರ ನಗದು, ಕಂಚಿನ ಪದಕ).
ಮಹಿಳೆಯರ ವಿಭಾಗ: ಚರಿಷ್ಮಾ ಆಳ್ವಾಸ್ ಕಾಲೇಜು, ಮೂಡುಬಿದಿರೆ (ದ್ವಿತೀಯ– ₹7 ಸಾವಿರ ನಗದು, ಬೆಳ್ಳಿ ಪದಕ), ಪ್ರಣಮ್ಯಾ, ಆಳ್ವಾಸ್ ಕಾಲೇಜು, ಮೂಡುಬಿದಿರೆ (ತೃತೀಯ–₹5 ಸಾವಿರ ನಗದು ಮತ್ತು ಕಂಚಿನ ಪದಕ).
ಸಮಾರೋಪದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.