ADVERTISEMENT

‘ಉನ್ನತ ವಿಚಾರದತ್ತ ಸಾಗುವ ಸಮಯ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 15:32 IST
Last Updated 15 ಆಗಸ್ಟ್ 2022, 15:32 IST
ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.
ಮಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.   

ಮಂಗಳೂರು: ನಗರದ ರಾಮಕೃಷ್ಣ ಮಠದ ಆವರಣದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ‘ಸ್ವಾತಂತ್ರ್ಯ ಹಾಗೂ ಸ್ವಚ್ಛತೆ ಮಹಾತ್ಮ ಗಾಂಧೀಜಿಯವರ ಕನಸುಗಳು. ಸ್ವಚ್ಛತೆಯನ್ನು ನನಸು ಮಾಡಲು ರಾಮಕೃಷ್ಣ ಮಠ ಅಹರ್ನಿಶಿ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.

ಮಾಜಿ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ‘ಸ್ವಾತಂತ್ರ್ಯದ ತರುವಾಯ ಭಾರತ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ರಕ್ಷಣೆ, ಆಹಾರ ಉತ್ಪಾದನೆ ಹೀಗೆ ಅನೇಕ ಸಾಧನೆಗಳನ್ನು ಮಾಡಿರುವುದು ಎಲ್ಲರಿಗೂ ಹೆಮ್ಮೆ ತರುವ ವಿಚಾರ. ಎಪ್ಪತ್ತೈದು ವರ್ಷಗಳ ಸ್ವಾತಂತ್ರೋತ್ಸದ ವೇಳೆ ಮುಂದಿನ 25 ವರ್ಷಗಳಲ್ಲಿ ಸಾಗಬೇಕಾದ ಹಾದಿಯ ಬಗ್ಗೆ ಯೋಚಿಸಬೇಕಿದೆ. ಸಣ್ಣತನ, ಅಸೂಯೆ, ದ್ವೇಷ, ಹಿಂಸೆ ಇಂತಹ ಕ್ಷುಲ್ಲಕ ವಿಚಾರಗಳನ್ನು ಬಿಟ್ಟು ಉನ್ನತ ವಿಚಾರದತ್ತ ಸಾಗಬೇಕಾಗಿದೆ’ ಎಂದರು.

ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿದರು. ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು ಸ್ವಾಮಿ ಅಭಿರಾಮಾನಂದಜಿ ಜೊತೆಗೂಡಿ ದೇಶಭಕ್ತಿಗೀತೆಗಳನ್ನು ಹಾಡಿದರು. ಬಾಲಕಾಶ್ರಮದ ಹಳೆ ವಿದ್ಯಾರ್ಥಿಗಳು, ಶಾರದಾ ಮಹಿಳಾ ವೃಂದದರು, ಸ್ವಚ್ಛ ಮಂಗಳೂರು ಸ್ವಯಂಸೇವಕರು ಸ್ವಾತಂತ್ರೋತ್ಸವದಲ್ಲಿ ಭಾಗಿಯಾದರು. ರಂಜನ್ ಬೆಳ್ಳರಪಾಡಿ ಕಾರ್ಯಕ್ರಮ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.