
ಉಳ್ಳಾಲ: ‘ವೀರರಾಣಿ ಅಬ್ಬಕ್ಕ ಉಳ್ಳಾಲ ಮತ್ತು ಮೂಡುಬಿದಿರೆಗೆ ಸೀಮಿತವಲ್ಲ. ಅವಳು ಇಡೀ ಭಾರತದ ಸುಪುತ್ರಿ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ದೇಶದಾದ್ಯಂತ ಆಚರಿಸುವಂತಾಗಬೇಕು’ ಎಂದು ಚೌಟರ ಅರಮನೆ ಮೂಡಬಿದಿರೆಯ ಅಬ್ಬಕ್ಕ ವಂಶಸ್ಥೆ, ವೀರರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಅಕ್ಷತಾ ಆದರ್ಶ್ ಜೈನ್ ಅಭಿಪ್ರಾಯಪಟ್ಟರು.
ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ವೀರ ರಾಣಿ ಅಬ್ಬಕ್ಕ ಉತ್ಸವ 2023-24ರಲ್ಲಿ ಪ್ರೊ.ಅಮೃತ ಸೋಮೇಶ್ವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗೋಷ್ಠಿಗಳಿಗೆ ಚಾಲನೆ ನೀಡಿದ ನಿವೃತ್ತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಮಾತನಾಡಿ, ರಾಣಿ ಅಬ್ಬಕ್ಕನ ಬಗ್ಗೆ ಮಾತನಾಡುವಾಗ ಅವಳು ನಮ್ಮವಳು ಮತ್ತು ರಾಷ್ಟ್ರ ಇತಿಹಾಸಕ್ಕೆ ಸೇರಿದವಳು ಎನ್ನವುದು ಉಲ್ಲೇಖಾರ್ಹವಾಗಿದೆ. ಅಬ್ಬಕ್ಕಳ ಇತಿಹಾಸವನ್ನು ಮರು ಕಟ್ಟುವ ಕೆಲಸವಾಗಬೇಕಾಗಿದ್ದು, 27 ವರ್ಷಗಳಿಂದ ಅಬ್ಬಕ್ಕಳ ವಿಚಾರದಲ್ಲಿ ಇತಿಹಾಸವನ್ನು ಕಟ್ಟುವ ಕೆಲಸ ಮಾಡುತ್ತಿರುವ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಸಾಮಸ್ಕೃತಿಕ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಸರೋಜಿನಿ ಎಸ್.ಶೆಟ್ಟಿ ಚಾಲನೆ ನೀಡಿದರು. ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ, ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್, ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ಸಾಲ್ಯಾನ್, ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿ ಗೌರವಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಯೇನೆಪೋಯ ಕಾಲೇಜು ಉಪ ಪ್ರಾಂಶುಪಾಲ ಡಾ.ಜೀವನ್ ರಾಜ್ ಕುತ್ತಾರ್, ಸೌತ್ ಕೆನರಾ ಫೊಟೊಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿಕಾ ಚೆನ್ನಕೇಶವ, ಬ್ಯಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಝೀರ್ ಉಳ್ಳಾಲ,ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ದೇವಕಿ ಆರ್.ಉಳ್ಳಾಲ್, ಯು.ಪಿ.ಆಲಿಯಬ್ಬ ಭಾಗವಹಿಸಿದ್ದರು.
ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಉಳ್ಳಾಲ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪುತ್ರನ್ ಮೊಗವೀರಪಟ್ಣ, ಯೂತ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಸಾಜಿದ್ ಉಳ್ಳಾಲ, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಸಯ್ಯದ್ ಮದನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹನೀಫ್ ಹಾಜಿ, ಇರಾ ಯುವಕ ಮಂಡಲ, ಆಲ್ವಿನ್ ಡಿಸೋಜ, ಉಮೇಶ್ ಬೋಳಾರ್, ಪ್ರಮೋದ್ ಉಳ್ಳಾಲ, ಇರಾ ನೇಮು ಪೂಜಾರಿ, ಎಂ.ಎಚ್.ಮಲಾರ್, ಬದ್ರುದ್ದೀನ್ ಹರೇಕಳ, ಮಂಜುನಾಥ್ ಎಸ್.ರೇವಣ್‍ಕರ್, ಶೇಖರ ಪಂಬದ ಅವರನ್ನು ಸನ್ಮಾನಿಸಲಾಯಿತು.
ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.