ADVERTISEMENT

ಭಾರತ ನಿರ್ಮಾಣದ ಮಹತ್ತರ ಬಜೆಟ್: ಹರೀಶ್ ಪೂಂಜ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:07 IST
Last Updated 1 ಫೆಬ್ರುವರಿ 2020, 14:07 IST
ಹರೀಶ್ ಪೂಂಜ
ಹರೀಶ್ ಪೂಂಜ   

ಬೆಳ್ತಂಗಡಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಂಡಿಸಿದ 2020-21ರ ಸಾಲಿನ ಮುಂಗಡಪತ್ರದಿಂದ ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ರೈಲ್ವೆ, ವಿದ್ಯುತ್, ಮೀನುಗಾರಿಕಾ ಕ್ಷೇತ್ರಗಳಿಗೆ ಉತ್ತೇಜನ ನೀಡುವುದಲ್ಲದೆ ಮಹತ್ವಾಕಾಂಕ್ಷೆಯ ಭಾರತ ನಿರ್ಮಾಣದಲ್ಲಿ ಮಹತ್ತರ ಬಜೆಟ್ ಆಗಲಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತ ಮಹಿಳೆಯರಿಗೆ ಧಾನ್ಯಲಕ್ಷ್ಮೀ ಯೋಜನೆ, 6.11 ಕೋಟಿ ರೈತರಿಗೆ ಫಸಲ್ ಭೀಮ ಯೋಜನೆ, ಬರಡು ಭೂಮಿಯಲ್ಲಿ ಸೋಲಾರ್ ಫವರ್ ಗ್ರಿಡ್ ಸ್ಥಾಪನೆ, ಕೃಷಿ ಉತ್ಪನ್ನಗಳ ಸ್ಥಾಪನೆಗೆ ಕೃಷಿ ಉಡಾನ್ ಯೋಜನೆ, ಜೀವಜಲ ಯೋಜನೆಯಿಂದ ಕೃಷಿ ವಲಯದಲ್ಲಿ ಉತ್ಪಾದನೆ ಹೆಚ್ಚಳವಾಗಿ ಮಹತ್ತರ ಬದಲಾವಣೆ ಆಗಲಿದೆ. ಆಯುಷ್ಮಾನ್ ಯೋಜನೆಗೆ ಆಸ್ಪತ್ರೆಗಳ ಸೇರ್ಪಡೆ, ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಆಸ್ಪತ್ರೆಗಳ ಆಧುನೀಕರಣ ಶ್ರೀಸಾಮಾನ್ಯರಿಗೆ ದುಬಾರಿಯಾಗಿದ್ದ ಆರೋಗ್ಯ ಸೇವೆ ಸುಲಲಿತವಾಗಿ ಲಭ್ಯವಾಗಲಿದೆ.

ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಸಹಕಾರಿ ಸಂಘದ ತೆರಿಗೆ ಇಳಿಕೆ ಶ್ಲಾಘನೀಯವಾಗಿದ್ದು, ಮೂಲ ಸೌಕರ್ಯಕ್ಕೆ ಉತ್ತೇಜನ ನೀಡಿದ್ದು, ವಿಶ್ವವ್ಯಾಪಿ ಇರುವ ಆರ್ಥಿಕ ಕುಸಿತದ ನಡುವೆಯೂ ತೆರಿಗೆ ಪದ್ದತಿ ಸುಲಭೀಕರಣಗೊಳಿಸಿ ಟ್ಯಾಕ್ಸ್ ಅಡಿಟ್ ಮಿತಿಯನ್ನು 5 ಕೋಟಿಗೆ ಏರಿಸಿದ ಪರಿಣಾಮ ಸಣ್ಣ ಉದ್ದಿಮೆದಾರರಿಗೆ, ಕೈಗಾರಿಕೆಗಳಿಗೆ ಉತ್ತೇಜನ ದೊರಕಿ ಉದ್ಯೋಗವಕಾಶ ಹೆಚ್ಚಳಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಹರೀಶ್ ಪೂಂಜ ಉತ್ತಮ ಬಜೆಟ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.