ADVERTISEMENT

ಪತ್ರಿಕಾ ದಿನಾಚರಣೆ: ಹೆರ್ಮನ್ ಮೊಗ್ಲಿಂಗ್ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 13:11 IST
Last Updated 1 ಜುಲೈ 2022, 13:11 IST
ಪತ್ರಿಕಾ ದಿನಾಚರಣೆ ಅಂಗವಾಗಿ ಹರ್ಮನ್ ಮೊಗ್ಲಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು
ಪತ್ರಿಕಾ ದಿನಾಚರಣೆ ಅಂಗವಾಗಿ ಹರ್ಮನ್ ಮೊಗ್ಲಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು   

ಮಂಗಳೂರು: ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಹೆರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ನಗರದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.

ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ ಸಂಪಾದಕ ಮೊಗ್ಲಿಂಗ್ ಪ್ರತಿಮೆಗೆ ಮಾಜಿ ಶಾಸಕ ಜೆ.ಆರ್.ಲೋಬೊ ಮಾಲಾರ್ಪಣೆ ಮಾಡಿದರು. ‘ಪತ್ರಿಕಾ ರಂಗ ಮತ್ತು ಕನ್ನಡ ಸಾಹಿತ್ಯ, ದಾಸಸಾಹಿತ್ಯಕ್ಕೆ ಮೊಗ್ಲಿಂಗ್ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಡೆಯಬೇಕು’ ಎಂದು ಅವರು ಹೇಳಿದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಪ್ರಾಂಶುಪಾಲ ಎಚ್.ಎಂ.ವಾಟ್ಸನ್ ‘ನಿಘಂಟು ಕರ್ತ ಕಿಟೆಲ್ ಅವರ ರೀತಿಯಲ್ಲೇ ಮೊಗ್ಲಿಂಗ್ ಪ್ರತಿಮೆಯನ್ನು ಕರ್ನಾಟಕದಾದ್ಯಂತ ಸ್ಥಾಪಿಸಬೇಕು’ ಎಂದು ಹೇಳಿದರು.

ADVERTISEMENT

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್, ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್, ಪದಾಧಿಕಾರಿಗಳಾದ ಕೆನ್ಯೂಟ್ ಪಿಂಟೊ, ಗಿರಿಧರ್ ಶೆಟ್ಟಿ , ಸುಳ್ಯ ತಾಲ್ಲೂಕು ಸಮಿತಿ ಅಧ್ಯಕ್ಷ ಜೆ.ಕೆ. ರೈ,ಪತ್ರಕರ್ತ ಮೋಹನ್ ಬೋಳಂಗಡಿ, ರಿಚ್ಚಿ ಲಸ್ರಾದೊ, ಹಮೀದ್ ವಿಟ್ಲ, ಈಶ್ವರ ವಾರಣಾಶಿ, ರಮೇಶ್ ನೀರಬಿದಿರೆ, ಶಿವಪ್ರಸಾದ್ ಆಲೆಟ್ಟಿ, ಶಿವರಾಮ ಕಜೆಮೂಲೆ, ಶ್ರೀಧರ್ ಕಜೆಗದ್ದೆ, ರಮೇಶ ನೀರಬಿದಿರೆ, ಜಯಶ್ರೀ ಕೊಯಿಂಗೋಡಿ, ಕೀರ್ತಿ ಹೊದ್ದೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.