ಮಂಗಳೂರು: ರೋಟರ್‍ಯಾಕ್ಟ್‌ನ ದಕ್ಷಿಣ ಏಷ್ಯಾದ ಚಟುವಟಿಕೆಗಳ ಕೇಂದ್ರಬಿಂದು ರೋಟರ್‍ಯಾಕ್ಟ್ ಸೌತ್ ಏಷ್ಯಾ ಮಲ್ಟಿ ಡಿಸ್ಟ್ರಿಕ್ಟ್ ಇನ್‌ಫಾರ್ಮೇಷನ್ ಆರ್ಗನೈಸೇಷನ್‌ನ (ಆರ್‌ಎಸ್‌ಎಎಂಡಿಐಒ) 2025–26ನೇ ಸಾಲಿನ ಪದಗ್ರಹಣ ಸಮಾರಂಭ ‘ಇತ್ತೆಹಾದ್ 2025’ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ‘ರೋರ್’ ಜೂನ್ 7 ಮತ್ತು 8ರಂದು ಅತ್ತಾವರದ ಅವತಾರ್ ಹೋಟೆಲ್‌ನಲ್ಲಿ ಜರುಗಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ, ರೋಟರ್‍ಯಾಕ್ಟ್ ಕ್ಲಬ್ ಆಫ್ ಮಂಗಳೂರು ಸಿಟಿ ಸದಸ್ಯ ಡಾ.ಬಿ. ದೇವದಾಸ ರೈ ಅವರು, 3 ದೇಶಗಳು ಮತ್ತು 23 ರಾಜ್ಯಗಳಿಂದ 250ಕ್ಕೂ ಅಧಿಕ ರೋಟರ್‍ಯಾಕ್ಟ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ಅನಿರುದ್ಧ ರಾಯ್ ಅವರು ಪ್ರದಾನ ಭಾಷಣ ಮಾಡುವರು. ರೋಟರಿ ಜಿಲ್ಲಾ ಗವರ್ನರ್ ವಿಕ್ರಮದತ್ತ ಭಾಗವಹಿಸುವರು. ಈ ಸಮಾರಂಭ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂದು ತಿಳಿಸಿದರು.
7ರಂದು 3.30ಕ್ಕೆ ಪದಗ್ರಹಣ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಸ್ಥೆಯ 16ನೇ ಅಧ್ಯಕ್ಷರಾಗಿ ಡ್ಯಾರಿಲ್ ಸ್ಟೀವನ್ ಡಿಸೋಜ ಅಧಿಕಾರ ಸ್ವೀಕರಿಸುವರು. ಇವರು ಕರ್ನಾಟಕದಿಂದ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಎರಡನೆಯವರು. 8ರಂದು ಮಂಗಳೂರಿನ ವಿಶೇಷತೆಗಳು, ಪ್ರೇಕ್ಷಣೀಯ ಸ್ಥಳಗಳು, ಸಾಂಸ್ಕೃತಿಕ ವೈವಿಧ್ಯಗಳನ್ನು ನೋಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್‌ಎಸ್‌ಎಎಂಡಿಐಒ ಅಧ್ಯಕ್ಷ ಡ್ಯಾರಿಲ್ ಸ್ಟೀವನ್ ಡಿಸೋಜ, ಮಾಧ್ಯಮ ಸಂಚಾಲಕ ಎಂ.ವಿ.ಮಲ್ಯ, ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.