ಉಜಿರೆ: ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ಎಂಬ ತತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್ ಆಶ್ರಯದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ₹ 2 ಕೋಟಿ ಮೊತ್ತದ ಸಮಾಜಮುಖಿ ಸೇವಾಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಪೂರನ್‌ವರ್ಮ ತಿಳಿಸಿದರು.
ಉಜಿರೆಯಲ್ಲಿ ಭಾನುವಾರ ಆಯೋಜಿಸಿದ್ದ ಸೌಹಾರ್ದಕೂಟದಲ್ಲಿ ಒಂದು ವರ್ಷದಲ್ಲಿ ಮಾಡಿದ ಸೇವೆ-ಸಾಧನೆಗಳ ಮಾಹಿತಿ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ವಿದ್ಯಾರ್ಥಿವೇತನ ವಿತರಣೆ, ರಕ್ತದಾನ ಶಿಬಿರ, ಆರೋಗ್ಯ ರಕ್ಷಣೆ ಬಗ್ಯೆ ಜಾಗೃತಿ ಶಿಬಿರ ಮೊದಲಾದ ಸೇವಾಕಾರ್ಯಗಳನ್ನು ರೋಟರಿಕ್ಲಬ್ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಮಾಡಲಾಗಿದೆ. ಇದಕ್ಕಾಗಿ ಬೆಳ್ತಂಗಡಿ ರೋಟರಿಕ್ಲಬ್‌ಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದ್ದು, ಉತ್ತಮ ರೋಟರಿಕ್ಲಬ್ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ರೋಟರಿಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಎ.ಜಯಕುಮಾರ್ ಶೆಟ್ಟಿ, ಡಾ.ಶಶಿಧರ ಡೋಂಗ್ರೆ, ಡಾ.ಸುವೀರ್‌ಜೈನ್, ಆದರ್ಶಕಾರಂತ, ಶ್ರೀಧರ ಕೆ.ವಿ., ಸೋನಿಯಾವರ್ಮ, ಕೆಯೂರ್‌ವರ್ಮ, ಡಾ.ಎಂ.ದಯಾಕರ್, ಗಾಯತ್ರಿ ಶ್ರೀಧರ್, ವಿನಯಾಕಿಶೋರ್ ಭಾಗವಹಿಸಿದ್ದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸೇವೆ-ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ರಾಷ್ಟ್ರಮಟ್ಟದ ಕ್ರೀಡಾಪಟು ಚಂದ್ರಿಕಾ, ಸುಕುಮಾರ ಜೈನ್ ಪ್ರಾಂಶುಪಾಲರು, ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು (ಶಿಕ್ಷಣ ಮತ್ತು ಆಡಳಿತ), ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಉಜಿರೆ (ಉದ್ಯಮಿಗಳು, ಅಗ್ರಿಲೀಫ್-ಹಾಳೆತಟ್ಟೆ ತಯಾರಿ), ಕೆ.ರಾಮಚಂದ್ರ ಶೆಟ್ಟಿ (ಸ್ವಚ್ಛತಾ ಸೇನಾನಿ, ಉಜಿರೆ) ಮೋಹನ ಕುಮಾರ್, ರಾಜೇಶ್ ಪೈ (ಬದುಕು ಕಟ್ಟೋಣ ತಂಡ, ಉಜಿರೆ) ಪ್ರೊ.ಶೈಲೇಶ್ ಕುಮಾರ್ (ವ್ಯಂಗ್ಯಚಿತ್ರಕಾರ), ಸಂದೀಪ್ ಹೊಳ್ಳ (ಛಾಯಾಗ್ರಾಗಕ(, ವಿಘ್ನರಾಜ ಎಸ್.ಆರ್.ಧರ್ಮಸ್ಥಳ (ಹಸ್ತಪ್ರತಿ ಸಂರಕ್ಷಣೆ), ಶೇಖರ್ ಟಿ. (ಪ್ರಬಂಧಕರು, ಮಂಜುಶ್ರೀ ಪ್ರಿಂಟರ್ಸ್ ಉಜಿರೆ), ಸುಮಂತ್‌ಕುಮಾರ್ ಜೈನ್, (ಅಧ್ಯಕ್ಷ ಎಕ್ಸೆಲ್ ಶಿಕ್ಷಣ ಸಂಸ್ಥೆಗಳು, ಗುರುವಾಯನಕೆರೆ) ಅವರನ್ನು ಗೌರವಿಸಲಾಯಿತು.
ಇಂಚರ ಕಾರಂತ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪೂರನ್‌ವರ್ಮ ಸ್ವಾಗತಿಸಿದರು. ಸಂದೇಶ್ ರಾವ್ ವಂದಿಸಿದರು. ವಕೀಲ ಬಿ.ಕೆ.ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.