ADVERTISEMENT

ಸೌದಿ ಪ್ರಯಾಣ: ಇಂದಿನಿಂದ ಭಾಗಶಃ ಸಡಿಲಿಕೆ

ಸೌದಿ ನಿರ್ಬಂಧ ಜನವರಿಯಲ್ಲಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 7:58 IST
Last Updated 15 ಸೆಪ್ಟೆಂಬರ್ 2020, 7:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ದೇಶಕ್ಕೆ ಹಿಂದಿರುಗುವವರಿಗೆ ಮತ್ತು ದೇಶದಿಂದ ಹೊರ ಹೋಗುವವರ ಮೇಲಿನ ಪ್ರಯಾಣ ನಿರ್ಬಂಧವನ್ನು ಸೌದಿ ಅರೇಬಿಯಾ ಸಂಪೂರ್ಣವಾಗಿ ಹಿಂಪಡೆಯಲಿದ್ದು, ನೆಲ, ಜಲ, ವಿಮಾನ ನಿಲ್ದಾಣಗಳನ್ನು 2021ರ ಜನವರಿ 1 ರಿಂದ ತೆರೆಯಲಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡುವ ದಿನಾಂಕವನ್ನು ಜನವರಿ 1 ಕ್ಕಿಂತ 30 ದಿನಗಳ ಮೊದಲು ಮತ್ತೊಮ್ಮೆಘೋಷಿಸಲಾಗುವುದು ಎಂದು ತಿಳಿಸಿದೆ. ಅಂತರರಾಷ್ಟ್ರಿಯ ವಿಮಾನಯಾನದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಇದೇ 15 ರಿಂದ ಭಾಗಶಃ ಹಿಂಪಡೆಯಲಾಗುವುದು. ಸಾರ್ವಜನಿಕ ಉದ್ಯಮ,ಸೇನಾ ವಿಭಾಗದ ನೌಕರರು ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು ಸೇರಿ ಹೊರ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT