ಮಂಗಳೂರು: ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪೆರಣಂಕಿಲ
ಮಹಾಗಣಪತಿ ದೇವಸ್ಥಾನದಲ್ಲಿ ಏ.9ರಿಂದ 13ರವರೆಗೆ ನಡೆಯಲಿರುವ ರಾಮೋತ್ಸವ, ಸಂತ ಸಂಗಮ, ಹಿಂದೂ ಸಮಾವೇಶದ ಪ್ರಯುಕ್ತ ಶರವು ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಹೊರೆಕಾಣಿಕೆ ಕೇಂದ್ರ ಉದ್ಘಾಟಿಸಲಾಯಿತು.
ಕಟೀಲು ಕ್ಷೇತ್ರದ ಲಕ್ಷ್ಮಿನಾರಾಯಣ ಆಸ್ರಣ್ಣ ಕಚೇರಿ ಉದ್ಘಾಟಿಸಿದರು. ಶರವು ರಾಘವೇಂದ್ರ ಶಾಸ್ತ್ರಿ, ಎಂ.ಬಿ.ಪುರಾಣಿಕ್ ಮಾತನಾಡಿದರು. ಪೆರಣಂಕಿಲ ರಾಮೋತ್ಸವ ಸಮಿತಿಯ ಉಪಾಧ್ಯಕ್ಷ
ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.
ಹೊರೆ ಕಾಣಿಕೆ ಸಂಗ್ರಹಣಾ ಕೇಂದ್ರದ ವ್ಯವಸ್ಥಾಪಕ ಶರವು ಗಣೇಶ್ ಭಟ್, ಆರ್‌ಎಸ್‌ಎಸ್ ಸೇವಾ ಪ್ರಮುಖ್ ಗುರುಪ್ರಸಾದ್ ಕಡಂಬಾರು, ರಂಗನಾಥ್ ಭಟ್, ಕೂಟ ಮಹಾ ಜಗತ್ತಿನ ಚಂದ್ರಶೇಖರ ಮಯ್ಯ, ವಿಪ್ರ ಸಮಾಗಮದ ರಾಮಕೃಷ್ಣ ರಾವ್, ವರದಾ ಕಣ್ವತೀರ್ಥ, ಸಾಯಿಗೀತಾ ಜ್ಞಾನೇಶ್ ಸುಳ್ಯ, ಶಾಲಿನಿ ಚಂದ್ರಶೇಖರ ವಿಟ್ಲ, ಹೊರೆಕಾಣಿಕೆ ಸಂಗ್ರಹಣಾ ಕೇಂದ್ರದ ಕಚೇರಿ ನಿರ್ವಾಹಕ ಸುಮಂತ್ ಸೋಮಯಾಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.