ADVERTISEMENT

ಶಿವಾಜಿ ಭಾವಚಿತ್ರಕ್ಕೆ ಬಣ್ಣ: ದಕ್ಷಿಣ ಕನ್ನಡದ ಕೈರಂಗಳದಲ್ಲಿ ಬಿಗುವಿನ ವಾತಾವರಣ

ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಬಣ್ಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 11:31 IST
Last Updated 1 ನವೆಂಬರ್ 2019, 11:31 IST
ಕೈರಂಗಳ ದೇವಿನಗರ ಎಂಬಲ್ಲಿ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಕಿಡಿಗೇಡಿಗಳು ಬಣ್ಣ ಎರಚಿರುವುದು
ಕೈರಂಗಳ ದೇವಿನಗರ ಎಂಬಲ್ಲಿ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಕಿಡಿಗೇಡಿಗಳು ಬಣ್ಣ ಎರಚಿರುವುದು   

ಮಂಗಳೂರು: ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ದೇವಿನಗರದಲ್ಲಿ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಗುರುವಾರ ರಾತ್ರಿ ಕಿಡಿಗೇಡಿಗಳು ಬಣ್ಣ ಎರಚಿದ್ದು, ಎರಡನೇ ಬಾರಿ ನಡೆದಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕೈರಂಗಳ ದೇವಿನಗರದಲ್ಲಿ ಛತ್ರಪತಿ ಶಿವಾಜಿ ಫ್ರೆಂಡ್ಸ್ ಸಂಘಟನೆಯ ಯುವಕರು ಸಾರ್ವಜನಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಕೆಲವು ದಿನಗಳ ಹಿಂದೆ ಬಸ್ ನಿಲ್ದಾಣಕ್ಕೆ ಕಿಡಿಗೇಡಿಗಳು ಬಣ್ಣ ಎರಚಿದ್ದರು. ಬಳಿಕ ರಾಜಿ ಸಂಧಾನದ ಮೂಲಕ ಪ್ರಕರಣ ಕೊನೆಗೊಳಿಸಲಾಗಿತ್ತು.

ಗುರುವಾರ ರಾತ್ರಿ ಕಿಡಿಗೇಡಿಗಳು ಮತ್ತೆ ಬಸ್ ನಿಲ್ದಾಣದ ಶಿವಾಜಿ ಫಲಕಕ್ಕೆ ಬಣ್ಣ ಎರಚಿದ್ದಾರೆ. ಇದರಿಂದ ಈ ಭಾಗದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ‌ಕೊಣಾಜೆ ಠಾಣೆಯ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.