ADVERTISEMENT

ಸೇಂಟ್ ಜೋಸೆಫ್‌ಗೆ ‘ಮೇಧಾ’ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:46 IST
Last Updated 5 ಜುಲೈ 2022, 3:46 IST
ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ‘ಮೇಧಾ ಮತ್ತು ಎಚೆಲಾನ್ 2.0’ ಸಾಂಸ್ಕೃತಿಕ ಉತ್ಸವದಲ್ಲಿ ಶ್ರೀಜಾ ಪಿ.ಕೆ ಮತ್ತು ವಿರಾಟ್, ಡಾ. ಕೆ.ಇ. ಪ್ರಕಾಶ್, ಪ್ರೊ.ಆನಂದ್ ಎಸ್. ಉಪ್ಪಾರ್ ಮತ್ತು ಡಾ. ಗಾಯತ್ರಿ ಬಿ.ಜೆ. ಇದ್ದರು.
ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ‘ಮೇಧಾ ಮತ್ತು ಎಚೆಲಾನ್ 2.0’ ಸಾಂಸ್ಕೃತಿಕ ಉತ್ಸವದಲ್ಲಿ ಶ್ರೀಜಾ ಪಿ.ಕೆ ಮತ್ತು ವಿರಾಟ್, ಡಾ. ಕೆ.ಇ. ಪ್ರಕಾಶ್, ಪ್ರೊ.ಆನಂದ್ ಎಸ್. ಉಪ್ಪಾರ್ ಮತ್ತು ಡಾ. ಗಾಯತ್ರಿ ಬಿ.ಜೆ. ಇದ್ದರು.   

ಮಂಗಳೂರು: ಇಲ್ಲಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಾಂತ್ರಿಕ, ನಿರ್ವಹಣೆ ಮತ್ತು ಸಾಂಸ್ಕೃತಿಕ ಉತ್ಸವ ‘ಮೇಧಾ ಮತ್ತು ಎಚೆಲಾನ್ 2.0’ ಈಚೆಗೆ ನಡೆಯಿತು.

ಇನ್ಫೋಸಿಸ್ ಮಂಗಳೂರು ಕಚೇರಿಯ ಡೆಲಿವರಿ ಮ್ಯಾನೇಜರ್ ಶ್ರೀಜಾ ಪಿ.ಕೆ, ಮೋಷನ್ ಪಿಕ್ಚರ್‌ನ ನಿರ್ದೇಶಕ ವಿರಾಟ್ ಅತಿಥಿಗಳಾಗಿದ್ದರು. ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ಕೆ.ಇ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಆನಂದ್ ಎಸ್ ಉಪ್ಪಾರ್ ಮತ್ತು ಡಾ. ಗಾಯತ್ರಿ ಬಿ.ಜೆ. ಕಾರ್ಯಕ್ರಮದ ಸಂಚಾಲಕರಾಗಿದ್ದರು.

ವಿದ್ಯಾರ್ಥಿ ಸಂಯೋಜಕ ಎಂ.ಎಸ್.ವಿಸ್ಮಯ ಸ್ವಾಗತಿಸಿದರು. ಶರತ್ ವಂದಿಸಿದರು. ಲಿಕಿತ್ ಮತ್ತು ಪ್ರತೀಕ್ಷಾ ನಿರೂಪಿಸಿದರು. ಅಧ್ಯಾಪಕ ಸಂಯೋಜಕರಾದ ಪ್ರೊ.ದೇವಿಕಾ ಶೆಣೈ, ಪ್ರೊ.ಸರಸ್ವತಿ ಉಪಸ್ಥಿತರಿದ್ದರು.

ADVERTISEMENT

ವಿವಿಧ ತಾಂತ್ರಿಕ ಮತ್ತು ನಿರ್ವಹಣಾ ಕಾರ್ಯಕ್ರಮಗಳು ನಡೆದವು. ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ಮೇಧಾ ಸಮಗ್ರ ಚಾಂಪಿಯನ್, ಟೀಮ್ ಸ್ಟಾರ್ಲಾರ್ಡ್ ಮತ್ತು ಟೀಮ್ ಫಾಲ್ಕನ್, ಎಚೆಲಾನ್ 2.0 ಬಹುಮಾನವನ್ನು ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.