
ಬಂಟ್ವಾಳ: ಕೃಷಿ ಪ್ರಧಾನ ಮತ್ತು ಸೌಹಾರ್ದಯುತ ಸಿದ್ಧಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ಭಕ್ತರು ಮತ್ತು ದಾನಿಗಳ ನೆರವಿನಿಂದ ₹ 2 ಕೋಟಿ ವೆಚ್ಚದಲ್ಲಿ ಚರ್ಚ್ ಪುನರ್ ನವೀಕರಣಗೊಳ್ಳುವುದರ ಜೊತೆಗೆ ಶತಮಾನದ ಹಿನ್ನೆಲೆ ಹೊಂದಿರುವುದು ಚರ್ಚ್‌ನ ಹಿರಿಮೆಯಾಗಿದೆ ಎಂದು ಮಂಗಳೂರು ಧರ್ಮ ಪ್ರಾಂತ ಧರ್ಮಾಧ್ಯಕ್ಷ ಪೀಟರ್ ಸಲ್ಡಾನ ಹೇಳಿದರು.
ಇಲ್ಲಿನ ಸಿದ್ಧಕಟ್ಟೆಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಸೇಂಟ್ ಪ್ಯಾಟ್ರಿಕ್ ಚರ್ಚನ್ನು ಗುರುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕಾರವಾರ ಧರ್ಮಪ್ರಾಂತ್ಯದ ಬಿಷಪ್ ಡುಮಿಂಗ್ ಡಾಯಸ್ ಅವರು ಮೇರಿ ಮಾತೆ ಗ್ರೆಟ್ಟೋ ಉದ್ಘಾಟಿಸಿದರು. ಮಂಗಳೂರು ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ವಿಕಾರ್ ಜನರಲ್ ಮ್ಯಾಕ್ಸಿಮ್ ಎಲ್. ನೊರೋನ್ಹ, ಮೂಡುಬಿದಿರೆ ವಿಕಾರ್ ವಾರ್ ಓನಿಲ್ ಡಿಸೋಜ ಆಶೀರ್ವಚನ ನೀಡಿದರು.
ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಮಾತನಾಡಿ, ನಿಗಮದಿಂದ ₹ 50ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್ ಮಾತನಾಡಿದರು.
ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಪೂಜಾರಿ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ್ ಶೆಟ್ಟಿ ಬಡ್ಯಾರ್, ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉದ್ಯಮಿ ಮಹಮ್ಮದ್ ರಫೀಕ್ ವಾಮದಪದವು, ಪ್ರಾಂತೀಯ ಮುಖ್ಯಸ್ಥರಾದ ಸಿಸ್ಟರ್ ಕ್ಲಾರ ಎಫ್.ಮಿನೇಜಸ್, ಸಿಸ್ಟರ್ ಎಂ. ಲಿಲ್ಲಿ ಪಿರೇರಾ, ಮಾಜಿ ಧರ್ಮಗುರುಗಳಾದ ಹೆರಾಲ್ಡ್ ತಾವ್ರೊ, ಪೀಟರ್ ಸೆರಾವೊ, ವಲೇರಿಯನ್ ಡಿಸೋಜ, ಆಂಟನಿ ಲಸ್ರಾದೊ, ಸಂಯೋಜಕ ಪ್ರವೀಣ್ ಕ್ರಾಸ್ತಾ ಭಾಗವಹಿಸಿದ್ದರು.
ದಾನಿಗಳು ಮತ್ತು ಸಿದ್ಧಕಟ್ಟೆ ಪರಿಸರದ ಧರ್ಮಗುರು, ಸಿಸ್ಟರ್‌ಗಳನ್ನು ಸನ್ಮಾನಿಸಲಾಯಿತು.
ಚರ್ಚ್ ಧರ್ಮಗುರು ಡೇನಿಯಲ್ ಡಿಸೋಜ ಸ್ವಾಗತಿಸಿ, ಸಮಿತಿ ಸಂಚಾಲಕ ಜೆರಾಲ್ಡ್ ಡಿಕೋಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾಲನಾ ಮಂಡಳಿ ಉಪಾಧ್ಯಕ್ಷ ಸುನಿಲ್ ಸಿಕ್ವೆರಾ ವಂದಿಸಿದರು. ಕಾರ್ಯದರ್ಶಿ ಪ್ರವೀಣ್ ಕುಟಿನ್ಹ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಪ್ರವೀಣ್ ಕ್ರಾಸ್ತ, ಜೆರಾಲ್ಡ್ ಡಿಕೋಸ್ತ, ಮೈಕಲ್ ಡಿಕೋಸ್ತ, ಉಲ್ಲಾಸ್ ಆಮ್ಯಾಲ್ ಭಾಗವಹಿಸಿದ್ದರು. ಉಪಾಧ್ಯಕ್ಷ ಸುನಿಲ್ ಸಿಕ್ವೆರಾ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಕುಟಿನ್ಹ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.