ವಸಂತ ಭಾರದ್ವಾಜ್
ಮಂಗಳೂರು: ಅಖಿಲ ಅಮೆರಿಕ ತುಳುವೆರೆ ಅಂಗಣ (ಆಟ) ನೀಡುವ ಸಿರಿಮುಡಿ ಪ್ರಶಸ್ತಿ–2025ಕ್ಕೆ ಕಬ್ಬಿನಾಲೆ ವಸಂತ ಭಾರದ್ವಾಜ್ ಬರೆದ ‘ತುಳು ಕಾವ್ಯ ಮೀಮಾಂಸೆ’ ಮತ್ತು ಬೆಂಗಳೂರಿನ ತುಳುವೆರೆ ಚಾವಡಿ ಪ್ರಕಟಿಸಿದ ‘ಜೋಕುಲೆ ಉಜ್ವಾಲ್’ ಕೃತಿ ಆಯ್ಕೆಯಾಗಿವೆ. ನಾರ್ತ್ ಕೆರೊಲಿನಾ ರಾಲಿಯಲ್ಲಿ ಈಚೆಗೆ ನಡೆದ ಸಂಘಟನೆಯ ಪ್ರಥಮ ಸಮಾವೇಶ ‘ಆಟ ಸಿರಿಪರ್ಬ’ದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. 'ಆಟ'ದ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ ಶೇರಿಗಾರ್ ಮತ್ತು ಅವರ ಕುಟುಂಬದ ಪ್ರಾಯೋಜಿಸುವ ಈ ಪ್ರಶಸ್ತಿ ₹75 ಸಾವಿರ ನಗದು, ಪ್ರಶಸ್ತಿ ಫಲಕ ಹೊಂದಿದೆ. ಭಾರತದಲ್ಲಿ ನಡೆಯುವ ತುಳು ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ತುಳು ಲಿಪಿ ಹಾಗೂ ಕನ್ನಡ ಲಿಪಿಯಲ್ಲಿರುವ ತುಳು ಬರಹಗಳನ್ನು (ಕಾದಂಬರಿ, ನಾಟಕ, ಸಾಹಿತ್ಯ, ಇತಿಹಾಸ) ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. 10 ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು 'ಆಟ'ದ ನಿರ್ದೇಶಕರಾಗಿರುವ ಸಾಹಿತ್ಯ ಸಮಿತಿಯ ಅಧ್ಯಕ್ಷ ಪ್ರಶಾಂತ ಕುಮಾರ್ ಮಟ್ಟು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.