ADVERTISEMENT

ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಬಸ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 6:35 IST
Last Updated 12 ಜೂನ್ 2020, 6:35 IST

ಮಂಗಳೂರು: ಇಲ್ಲಿನ ಬಸ್‌ ನಿಲ್ದಾಣದಿಂದ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳಾದ ಬಳ್ಳಾರಿ, ಇಳಕಲ್, ಲಿಂಗಸುಗೂರು, ಬೆಳಗಾವಿ ಮುಂತಾದ ಸ್ಥಳಗಳಿಗೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಮಂಗಳೂರಿನಿಂದ ಸಂಜೆ 6.50 ಹೊರಡುವ ಬಸ್‌ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ಮೂಲಕ ಮರುದಿನ ಬೆಳಿಗ್ಗೆ 7 ಗಂಟೆಗೆ ಬಳ್ಳಾರಿಗೆ ತಲುಪಲಿದ್ದು, ಪ್ರಯಾಣ ದರ ₹800 ನಿಗದಿಪಡಿಸಲಾಗಿದೆ. ಬಳ್ಳಾರಿಯಿಂದ ಸಂಜೆ 5.31 ಕ್ಕೆ ಹೊರಡುವ ಬಸ್‌, ಮರುದಿನ ಬೆಳಿಗ್ಗೆ 5 ಗಂಟೆಗೆ ಮಂಗಳೂರಿಗೆ ಬರಲಿದೆ.

ಮಂಗಳೂರಿನಿಂದ ಸಂಜೆ 7 ಕ್ಕೆ ಹೊರಡುವ ಬಸ್‌, ಹುಬ್ಬಳ್ಳಿ, ಬಾದಾಮಿ, ಹುನಗುಂದ ಮೂಲಕ ಮರುದಿನ ಬೆಳಿಗ್ಗೆ 7.30ಕ್ಕೆ ಲಿಂಗಸುಗೂರು ತಲುಪಲಿದೆ. ಪ್ರಯಾಣ ದರ ₹950 ನಿಗದಿ ಮಾಡಲಾಗಿದೆ. ಲಿಂಗಸುಗೂರಿನಿಂದ ಸಂಜೆ 4.30 ಕ್ಕೆ ಹೊರಡುವ ಈ ಬಸ್‌, ಮರುದಿನ ಬೆಳಿಗ್ಗೆ 5 ಗಂಟೆಗೆ ಮಂಗಳೂರಿಗೆ ಬರಲಿದೆ.

ADVERTISEMENT

ಮಂಗಳೂರಿನಿಂದ ಸಂಜೆ 7.30 ಕ್ಕೆ ಹೊರಡುವ ಬಸ್, ಹುಬ್ಬಳ್ಳಿ, ಗದಗ, ಗಜೇಂದ್ರಗಡ ಮೂಲಕ ಮರುದಿನ ಬೆಳಿಗ್ಗೆ 7ಕ್ಕೆ ಇಳಕಲ್ ತಲುಪಲಿದೆ. ಪ್ರಯಾಣ ದರ ₹950 ಇರಲಿದೆ. ಇಳಕಲ್‌ನಿಂದ ಸಂಜೆ 6.30 ಕ್ಕೆ ಹೊರಡುವ ಬಸ್‌, ಮರುದಿನ ಬೆಳಿಗ್ಗೆ 6 ಗಂಟೆಗೆ ಮಂಗಳೂರಿಗೆ ತಲುಪಲಿದೆ.

ಮಂಗಳೂರಿನಿಂದ ಸಂಜೆ 6.30 ಕ್ಕೆ ಹೊರಡುವ ಬಸ್‌, ಕುಂದಾಪುರ, ಹುಬ್ಬಳ್ಳಿ, ಧಾರವಾಡ ಮೂಲಕ ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿಗೆ ತಲುಪಲಿದೆ. ಪ್ರಯಾಣ ದರ ₹800 ಇರಲಿದೆ. ಬೆಳಗಾವಿಯಿಂದ ಸಂಜೆ 6.30 ಕ್ಕೆ ಹೊರಡುವ ಬಸ್‌, ಮರುದಿನ ಬೆಳಿಗ್ಗೆ 5.30ಕ್ಕೆ ಮಂಗಳೂರಿಗೆ ಬರಲಿದೆ.

ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಸರ್ಕಾರದ ಮಾರ್ಗಸೂಚಿಯಂತೆ ಮಂಗಳೂರು ವಿಭಾಗದ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ತಪಾಸಣೆ ಮಾಡಿ, ಪ್ರಯಾಣಿಕರ ವಿವರಗಳನ್ನು ದಾಖಲಿಸಿ, ಸುರಕ್ಷಿತ ಅಂತರದೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.