ADVERTISEMENT

ಎನ್‌ಐಟಿಕೆ: ಚಾರ್ಜಿಂಗ್ ಕೇಂದ್ರದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 15:59 IST
Last Updated 9 ಮೇ 2022, 15:59 IST

ಮಂಗಳೂರು: ಇ– ಮೊಬಿಲಿಟಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ಗಾಗಿ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಅಳವಡಿಸಿರುವ ‘ಉರ್ಜಾ’ ಸೌರ ವಿದ್ಯುತ್ ಚಾರ್ಜಿಂಗ್ ಕೇಂದ್ರದ ಉದ್ಘಾಟನೆ ಮೇ 11ರ ಸಂಜೆ 4.30ಕ್ಕೆ ನಡೆಯಲಿದೆ. ಇದು ಕಾಲೇಜಿನ 1970ರ ಬ್ಯಾಚ್‌ ವಿದ್ಯಾರ್ಥಿಗಳ ಕೊಡುಗೆಯಾಗಿದೆ.

ಎನ್‌ಐಟಿಕೆ ನಿರ್ದೇಶಕ ಪ್ರೊ. ಉದಯಕುಮಾರ್ ಆರ್. ಉದ್ಘಾಟಿಸುವರು. ಡೀನ್ ಪ್ರೊ. ವಿಜಯ್ ದೇಸಾಯಿ ಅಧ್ಯಕ್ಷತೆ ವಹಿಸುವರು. ಈ ಇವಿ ಚಾರ್ಜಿಂಗ್ ಕೇಂದ್ರದಲ್ಲಿ ಯಾವುದೇ ಸಮಯದಲ್ಲಿ ಆರು ಸೈಕಲ್, ಎರಡು ಇ–ಸ್ಕೂಟರ್, ಇ–ಬೈಕ್, ಒಂದು ಕಾರನ್ನು ಚಾರ್ಜ್ ಮಾಡಬಹುದು. ಎನ್‌ಐಟಿಕೆ ವಾಹನ ಹೊರತುಪಡಿಸಿ, ಉಳಿದ ವಾಹನಗಳ ಮಾಲೀಕರು, IRIS ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಹಣ ಪಾವತಿಸಿ, ಈ ಸೌಲಭ್ಯ ಪಡೆಯಬಹುದು.

ಇದು ₹20 ಲಕ್ಷ ಮೊತ್ತದ ಯೋಜನೆಯಾಗಿದ್ದು, 1970ರ ಹಳೆ ವಿದ್ಯಾರ್ಥಿಗಳ ಕೊಡುಗೆಯಾಗಿದೆ. ಸಹಾ
ಯಕ ಪ್ರಾಧ್ಯಾಪಕ ಡಾ. ಪೃಥ್ವಿರಾಜ್ ಯು ಈ ಯೋಜನೆಯ ಮುಖ್ಯಸ್ಥರಾಗಿದ್ದಾರೆ. ಬಿ.ಟೆಕ್, ಎಂ.ಟೆಕ್, ಪಿಎಚ್‌.ಡಿ ಪದವಿಯ ಒಟ್ಟು 36 ವಿದ್ಯಾರ್ಥಿಗಳು ಯೋಜನೆಗಾಗಿ ಕೆಲಸ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.